×
Ad

ಸಿಂಗಾಪುರದ ಚಾಂಗಿ ವಿಮಾನನಿಲ್ದಾಣ ಪಾಸ್‍ಪೋರ್ಟ್ ಮುಕ್ತ!

Update: 2023-09-21 22:41 IST

ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ | Photo: NDTV 

ಸಿಂಗಾಪುರ: ಮುಂದಿನ ವರ್ಷದಿಂದ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ ಪಾಸ್‍ಪೋರ್ಟ್ ಮುಕ್ತವಾಗಲಿದ್ದು ಸ್ವಯಂಚಾಲಿತ `ವಲಸೆ ಕ್ಲಿಯರೆನ್ಸ್' ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.

ವಿಮಾನ ನಿಲ್ದಾಣದಲ್ಲಿ ಸ್ವಯಂಚಾಲಿತ ವಲಸೆ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಇದರಿಂದ ಪ್ರಯಾಣಿಕರು ಪಾಸ್‍ಪೋರ್ಟ್‍ನ ಅಗತ್ಯವಿಲ್ಲದೆಯೇ, ಬಯೊಮೆಟ್ರಿಕ್ ಮಾಹಿತಿಯನ್ನು ಒದಗಿಸಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಮವಾರ ನಡೆದ ಸಂಸತ್ ಅಧಿವೇಶನದಲ್ಲಿ ಸಿಂಗಾಪುರ ಮಾಹಿತಿ ಸಚಿವೆ ಜೋಸೆಫಿನ್ ಟಿಯೊ ಈ ಘೋಷಣೆ ಮಾಡಿದ್ದು ಈ ಅಧಿವೇಶನದಲ್ಲಿ ದೇಶದ ವಲಸೆ ಕಾಯ್ದೆಗೆ ಹಲವು ತಿದ್ದುಪಡಿ ಮಾಡಲಾಗಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News