×
Ad

ಸುಡಾನ್: ಅರೆ ಸೇನಾಪಡೆಯ ದಾಳಿಯಲ್ಲಿ 114 ನಾಗರಿಕರ ಮೃತ್ಯು

Update: 2025-04-13 22:50 IST

ಸಾಂದರ್ಭಿಕ ಚಿತ್ರ - Photo Credit : AP

ಖಾರ್ಟೌಮ್: ಪಶ್ಚಿಮ ಸುಡಾನ್‍ ನ ಉತ್ತರ ದಾರ್ಫುರ್ ರಾಜ್ಯದ ರಾಜಧಾನಿ ಎಲ್ ಫಶರ್‍ನಲ್ಲಿ ಕಳೆದ 2 ದಿನಗಳಲ್ಲಿ ಅರೆ ಸೇನಾಪಡೆಯ ದಾಳಿಯಲ್ಲಿ 114 ನಾಗರಿಕರು ಸಾವನ್ನಪ್ಪಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಝಮ್‍ ಜಮ್ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದು ಇದರಲ್ಲಿ ಶಿಬಿರದ ಆಸ್ಪತ್ರೆಯನ್ನು ನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ ರಿಲೀಫ್ ಇಂಟರ್‍ನ್ಯಾಷನಲ್‍ನ 9 ಸಿಬ್ಬಂದಿಗಳೂ ಸೇರಿದ್ದಾರೆ ಎಂದು ಕ್ಸಿನ್‍ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಅಬುಶೌಕ್ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ 14ಕ್ಕೇರಿದೆ ಎಂದು ಕ್ಸಿನ್‍ ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News