×
Ad

ಸುನೀತಾ ವಿಲಿಯಮ್ಸ್ ವಾಪಸಾತಿ ಕುರಿತು ಮಹತ್ವದ ಹೇಳಿಕೆ ನೀಡಲಿರುವ ನಾಸಾ

Update: 2024-07-25 22:03 IST

ಸುನೀತಾ ವಿಲಿಯಮ್ಸ್‌ | PC: X \ @NASA_Astronauts

ವಾಷಿಂಗ್ಟನ್ : ಬೋಯಿಂಗ್ಸ್ ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಬಾಕಿಯಾಗಿರುವ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳುವ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಜುಲೈ 25(ಗುರುವಾರ) ರಾತ್ರಿ ಮಹತ್ವದ ಹೇಳಿಕೆ ನೀಡಲಿದೆ ಎಂದು ವರದಿಯಾಗಿದೆ.

ಬಾಹ್ಯಾಕಾಶ ನಿಲ್ದಾಣದಿಂದ ಇವರಿಬ್ಬರು ಜೂನ್ 14ರಂದು ಹಿಂತಿರುಗಬೇಕಿತ್ತು. ಆದರೆ ಸ್ಟಾರ್‌ಲೈನರ್‌ನ ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಕಂಡುಬAದ ಕಾರಣ ಬಾಹ್ಯಾಕಾಶದಲ್ಲೇ ಉಳಿದಿದ್ದಾರೆ. ನಾಸಾದ ಇಂಜಿನಿಯರ್‌ಗಳು ತಾಂತ್ರಿಕ ದೋಷವನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News