×
Ad

ಕದನ ವಿರಾಮ ಒಪ್ಪಂದದ ಬೆನ್ನಲ್ಲೇ ಅಫ್ಘಾನ್ ನಿರಾಶ್ರಿತರ ತೆರವು ಕಾರ್ಯಾಚರಣೆಗೆ ಪಾಕ್ ಚಾಲನೆ

Update: 2025-10-19 22:30 IST

Photo Credi : NDTV

ಲಾಹೋರ್, ಅ.19: ಅಫ್ಘಾನಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದದ ಬೆನ್ನಲ್ಲೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸರಕಾರ ಕರಾಚಿಯಲ್ಲಿ 1983ರಿಂದಲೂ ವಾಸಿಸುತ್ತಿದ್ದ ಅಫ್ಘಾನ್ ನಿರಾಶ್ರಿತರನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿರುವುದಾಗಿ ವರದಿಯಾಗಿದೆ.

ಫೆಡರಲ್ ಸರಕಾರದ ಆದೇಶದಂತೆ ಕಾರ್ಯನಿರ್ವಹಿಸಿದ ಸಿಂಧ್ ಪೊಲೀಸರು ಕಂದಾಯ ಇಲಾಖೆಯ ನೆರವಿನಿಂದ ಸುಮಾರು 200 ಎಕರೆ ಪ್ರದೇಶದಲ್ಲಿದ್ದ ಸುಮಾರು 300 ಸಣ್ಣ ಮನೆಗಳನ್ನು ತೆರವುಗೊಳಿಸಿದ್ದಾರೆ. ಇಲ್ಲಿ ಕಳೆದ 42 ವರ್ಷಗಳಿಂದಲೂ ಸುಮಾರು 20,000 ಅಫ್ಘಾನಿಸ್ತಾನೀಯರು ವಾಸಿಸುತ್ತಿದ್ದರು. ಮನೆಗಳನ್ನು ತೆರವುಗೊಳಿಸುವ ಜೊತೆಗೆ ಅಫ್ಘಾನ್ ಪ್ರಜೆಗಳನ್ನು ಗುರುತಿಸಲು ಅನಿರೀಕ್ಷಿತ ತಪಾಸಣೆಗಳನ್ನೂ ಆರಂಭಿಸಲಾಗಿದೆ. ಅಫ್ಘಾನ್ ನಿರಾಶ್ರಿತರ ವಿರುದ್ಧದ ಕಾರ್ಯಾಚರಣೆ ಕರಾಚಿ ಸೇರಿದಂತೆ ಪ್ರಾಂತದಾದ್ಯಂತ ಮುಂದುವರಿಯಲಿದೆ. ಅಫ್ಘಾನ್ ನಿರಾಶ್ರಿತರ ಡೇರೆಗಳನ್ನು ತೆರವುಗೊಳಿಸುವಂತೆ ಪಾಕಿಸ್ತಾನ ಸರಕಾರ ಎಲ್ಲಾ ಪ್ರಾಂತೀಯ ಸರಕಾರಗಳಿಗೂ ಆದೇಶಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News