×
Ad

ಮೂವರು ಪುತ್ರರನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಹತ್ಯೆಗೈದ ವ್ಯಕ್ತಿ‌

ಅಮೆರಿಕದಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ ಮೂವರು ಪುತ್ರರನ್ನು ಸಾಲಾಗಿ ನಿಲ್ಲಿಸಿ ಹತ್ಯೆಗೈದಿದ್ದು ಬಳಿಕ ಆತನನ್ನು ಬಂಧಿಸಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

Update: 2023-06-17 23:44 IST

ವಾಷಿಂಗ್ಟನ್, ಜೂ.17: ಅಮೆರಿಕದಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ ಮೂವರು ಪುತ್ರರನ್ನು ಸಾಲಾಗಿ ನಿಲ್ಲಿಸಿ ಹತ್ಯೆಗೈದಿದ್ದು ಬಳಿಕ ಆತನನ್ನು ಬಂಧಿಸಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಕ್ಲೆಮೆಂಟ್ ಕೌಂಟಿಯ ನಿವಾಸಿ ಚಾಡ್ ಡೋರ್ಮನ್ ತನ್ನ ಮೂವರು ಪುತ್ರರನ್ನು( ಮೂರು ವರ್ಷ, 4 ವರ್ಷ ಮತ್ತು 7 ವರ್ಷದ ಮಕ್ಕಳು) ಮನೆಯ ಹಾಲ್ನಲ್ಲಿ ಸಾಲಾಗಿ ನಿಲ್ಲಿಸಿ ಗುಂಡಿಕ್ಕಿದ್ದಾನೆ. ಆಗ ಒಬ್ಬ ಬಾಲಕ ತಪ್ಪಿಸಿಕೊಂಡು ಹೊರಗೆ ಓಡಿದಾಗ ಆತನನ್ನು ಬೆನ್ನಟ್ಟಿ ಹಿಡಿದು ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಗುಂಡಿನ ಸದ್ದು ಕೇಳಿ ಅಡುಗೆಮನೆಯಲ್ಲಿದ್ದ ಪತ್ನಿ ಹೊರಗೆ ಬಂದು ಪತಿಯ ಕೈಯಲ್ಲಿದ್ದ ಪಿಸ್ತೂಲನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾಳೆ. ಆಗ ಆಕೆಯ ಕೈಗೂ ಗುಂಡೇಟಿನ ಗಾಯವಾಗಿದೆ. ದಂಪತಿಯ ಪುತ್ರಿ ಮನೆಯಿಂದ ಹೊರಗೆ ಓಡಿ ತಪ್ಪಿಸಿಕೊಂಡಿದ್ದಾಳೆ.

ಬಳಿಕ ಪೊಲೀಸರು ಬಂದಾಗ ಡೋರ್ಮನ್ ಏನೂ ಆಗದಂತೆ ಮನೆಯ ಹೊರಗಿನ ತೋಟದಲ್ಲಿ ಕುಳಿತಿದ್ದ. ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕೈಗೆ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News