×
Ad

ದರೋಡೆ ಕುರಿತು ವರದಿ ಮಾಡುತ್ತಿದ್ದ ಟಿವಿ ಚಾನೆಲ್ನ ಸಿಬ್ಬಂದಿಯನ್ನೇ ದರೋಡೆಗೈದ ತಂಡ !

Update: 2023-08-29 22:46 IST

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಚಿಕಾಗೊದಲ್ಲಿ ಇತ್ತೀಚೆಗೆ ನಡೆದಿದ್ದ ಸರಣಿ ದರೋಡೆ ಪ್ರಕರಣಗಳ ಬಗ್ಗೆ ಸ್ಥಳೀಯರಿಂದ ಅಭಿಪ್ರಾಯ ಸಂಗ್ರಹಿಸಿ ವಿಶೇಷ ವರದಿ ಪ್ರಸಾರ ಮಾಡುತ್ತಿದ್ದ ಟಿವಿ ನ್ಯೂಸ್ ಚಾನೆಲ್ನ ಸಿಬ್ಬಂದಿಗಳನ್ನೇ ತಂಡವೊಂದು ದರೋಡೆ ಮಾಡಿದ ಘಟನೆ ವರದಿಯಾಗಿದೆ.

ರವಿವಾರ ರಾತ್ರಿ ಶಸ್ತ್ರಸಜ್ಜಿತ ತಂಡವೊಂದು ಮಹಿಳೆ ಚಲಾಯಿಸುತ್ತಿದ್ದ ಕಾರನ್ನು ದರೋಡೆ ಮಾಡಿತ್ತು. ಈ ಘಟನೆ ಬಗ್ಗೆ ಯುನಿವಿಷನ್ ಚಿಕಾಗೊ ಟಿವಿ ನ್ಯೂಸ್ ಚಾನೆಲ್ನ ವರದಿಗಾರ ಹಾಗೂ ವೀಡಿಯೊಗ್ರಾಫರ್ ಸ್ಥಳಕ್ಕೆ ತೆರಳಿ ವಿಶೇಷ ವರದಿ ಸಿದ್ಧಪಡಿಸುತ್ತಿದ್ದಾಗ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಟಿವಿ ಸಿಬಂದಿಯತ್ತ ಗುಂಡು ಹಾರಿಸಿದೆ.

ಬಳಿಕ ಮಾಸ್ಕ್ ಧರಿಸಿದ್ದ ಮೂವರು ಸಿಬ್ಬಂದಿಯನ್ನು ಬಂದೂಕಿನಿಂದ ಬೆದರಿಸಿ ಅವರಲ್ಲಿದ್ದ ಬೆಲೆಬಾಳುವ ವಸ್ತುಗಳು ಹಾಗೂ ಎರಡು ವೀಡಿಯೊ ಕ್ಯಾಮೆರಾವನ್ನು ದರೋಡೆ ಮಾಡಿ ಅಲ್ಲಿಂದ ಪರಾರಿಯಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ ಮತ್ತು ತನಿಖಾ ತಂಡ ಸ್ಥಳಕ್ಕೆ ಧಾವಿಸಿದ್ದು ತನಿಖೆ ಆರಂಭಿಸಿದೆ ಎಂದು ಚಿಕಾಗೊ ಪೊಲೀಸ್ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News