×
Ad

ವಿಶ್ವದ 14 ಅತೀ ಎತ್ತರದ ಶಿಖರ ಏರಿದ ಕಿರಿಯ ಪರ್ವತಾರೋಹಿ | ನೇಪಾಳದ ನಿಮಾ ರಿಂಜಿ ದಾಖಲೆ

Update: 2024-10-27 21:55 IST

PC : instagram | nimasherpa_official

 

ಕಠ್ಮಂಡು : ನೇಪಾಳದ 18 ವರ್ಷದ ನಿಮಾ ರಿಂಜಿ ಶೆರ್ಪ ವಿಶ್ವದ ಎಲ್ಲಾ 14 ಅತೀ ಎತ್ತರದ ಶಿಖರಗಳನ್ನು ಏರಿದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ದಾಖಲೆ ಬರೆದಿರುವುದಾಗಿ ವರದಿಯಾಗಿದೆ.

ಸಹ ಪರ್ವತಾರೋಹಿ ಪಸಂಗ್ ನುರ್ಬು ಶೆರ್ಪ ಜತೆ ನೇಪಾಳದ 8,027 ಮೀಟರ್ ಎತ್ತರದ ಶಿಶಾಪಾಂಗ್ಮಾ ಶಿಖರವನ್ನು ಯಶಸ್ವಿಯಾಗಿ ಏರುವ ಮೂಲಕ ನಿಮಾ ರಿಂಜಿ ಈ ಸಾಧನೆ ಪೂರ್ಣಗೊಳಿಸಿದ್ದಾರೆ.

ನೇಪಾಳದ ಮನಾಸ್ಲು ಪರ್ವತವನ್ನು ಚಳಿಗಾಲದಲ್ಲಿ ಆಮ್ಲಜನಕ ಅಥವಾ ಹಗ್ಗದ ನೆರವಿಲ್ಲದೆ ಏರುವುದು ತನ್ನ ಮುಂದಿನ ಯೋಜನೆಯಾಗಿದೆ ಎಂದು ನಿಮಾ ರಿಂಜಿ ಹೇಳಿದ್ದಾರೆ. ಈ ಸಾಹಸದಲ್ಲಿ ಇಟಲಿಯ ಸಿಮೋನ್ ಮೊರೊ ಅವರೂ ಜತೆಗಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News