ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ : ಟ್ರಂಪ್ ಪುನರುಚ್ಛಾರ
ಯುದ್ಧದ ವೇಳೆ 7 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದ ಅಮೆರಿಕದ ಅಧ್ಯಕ್ಷ
ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದೇನೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ಎರಡೂ ರಾಷ್ಟ್ರಗಳನ್ನು ತಡೆದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಚರಿಸಿದ್ದಾರೆ.
ನಾನು ಮಧ್ಯಪ್ರವೇಶಿಸದಿದ್ದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಅಣ್ವಸ್ತ್ರ ಯುದ್ಧವಾಗುತ್ತಿತ್ತು. ಅವರು ಹೋರಾಡುತ್ತಿರುವುದನ್ನು ನಾನು ನೋಡಿದೆ. 7 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಟ್ರಂಪ್ ಹೇಳಿದರು. ಆದರೆ ಅವು ಯಾವ ದೇಶದ್ದು ಎಂಬುದನ್ನು ಟ್ರಂಪ್ ಸ್ಪಷ್ಟವಾಗಿ ಹೇಳಿಲ್ಲ.
ನಾನು ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೆ. ನಿಮ್ಮ ಹಾಗೂ ಪಾಕಿಸ್ತಾನ ನಡುವೆ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದೆ, ಎರಡೂ ದೇಶಗಳ ನಡುವೆ ಬಹಳ ವರ್ಷಗಳಿಂದ ದ್ವೇಷವಿದೆ ಎಂದು ಹೇಳಿದ್ದಾರೆ.
"ನೀವು ಪರಮಾಣು ಯುದ್ದದಲ್ಲಿ ಅಂತ್ಯವಾಗಲಿದ್ದೀರಿ. ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ. ಇಲ್ಲವೇ, ನಿಮ್ಮ ಮೇಲೆ ಹೆಚ್ಚುವರಿ ಸುಂಕ ವಿಧಿಸುತ್ತೇವೆ ಎಂದು ಹೇಳಿದ್ದೆ. ಐದು ಗಂಟೆಯಾಗುವುದರೊಳಗೆ ಸಂಘರ್ಷ ನಿಂತಿತ್ತು. ಬಹುಶಃ ಅದು ಮತ್ತೆ ಆರಂಭವಾಗಬಹುದು. ಹಾಗೇನಾದರೆ ಆದರೆ ಅದನ್ನು ನಿಲ್ಲಿಸುತ್ತೇನೆʼ ಎಂದಿದ್ದಾರೆ.
ಟ್ರಂಪ್ ಹೇಳುವ ಪ್ರಕಾರ, ಅವರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹಾಕಿ ಪಾಕಿಸ್ತಾನದ ಜೊತೆ ಯುದ್ಧ ವಿರಾಮಕ್ಕೆ ಒಪ್ಪುವಂತೆ ಮಾಡಿದ್ದರು.