ನಾಸಾದ ಎರಡು ಯೋಜನೆಗಳ ಸ್ಥಗಿತಕ್ಕೆ ಟ್ರಂಪ್ ಆಡಳಿತ ನಿರ್ಧಾರ
Update: 2025-08-07 23:07 IST
ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್, ಆ.7: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ನಾಸಾ)ದ ಎರಡು ಯೋಜನೆಗಳನ್ನು ಸ್ಥಗಿತಗೊಳಿಸಲು ಟ್ರಂಪ್ ಆಡಳಿತ ನಿರ್ಧರಿಸಿರುವುದಾಗಿ ವರದಿಯಾಗಿದೆ.
ಇಂಗಾಲದ ಡೈಯಾಕ್ಸೈಡ್ ಮತ್ತು ಸಸ್ಯಗಳ ಆರೋಗ್ಯವನ್ನು ಮೇಲ್ವಿಚಾರಣೆ ನಡೆಸುವ ನಾಸಾದ ಎರಡು ಯೋಜನೆಗಳಿಗೆ ಟ್ರಂಪ್ ಸರಕಾರದ 2026ರ ಬಜೆಟ್‌ನಲ್ಲಿ ಯಾವುದೇ ಅನುದಾನ ಒದಗಿಸಲಾಗಿಲ್ಲ. ಹಸಿರುಮನೆ ಅನಿಲ ಮತ್ತು ಸಸ್ಯ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ನಾಸಾ ಕಾರ್ಯಾಚರಣೆಗಳನ್ನು ಮುಚ್ಚುವುದರಿಂದ ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ರೈತರಿಗೆ ಅಂಕಿಅಂಶದ ಮಹತ್ವದ ಮೂಲ ಸ್ಥಗಿತಗೊಳ್ಳಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.