×
Ad

ನಾನು ಎಲಾನ್‌ ಮಸ್ಕ್ ಅವರನ್ನು ಕ್ಷಮಿಸಬಲ್ಲೆ: ಡೊನಾಲ್ಡ್ ಟ್ರಂಪ್

Update: 2025-06-11 19:00 IST

Photo |  REUTERS

ವಾಶಿಂಗ್ಟನ್: “ಎಲಾನ್ ಮಸ್ಕ್ ಅವರೊಂದಿಗಿನ ಸಂಬಂಧವನ್ನು ನಾನು ಸರಿಪಡಿಸಿಕೊಳ್ಳಬಲ್ಲೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, Pod Force One ಪಾಡ್ ಕಾಸ್ಟ್ ಸಂದರ್ಶನದಲ್ಲಿ ಹೇಳುವ ಮೂಲಕ, ತಮ್ಮಿಬ್ಬರ ನಡುವಿನ ಸಂಬಂಧ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.

“ನೋಡಿ, ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಹಾಗಾಗಿರುವ ಬಗ್ಗೆ ನನಗೆ ನಿಜಕ್ಕೂ ಅಚ್ಚರಿಯಾಗಿದೆ. ಅದ್ಭುತವಾಗಿರುವ ಮಸೂದೆಯೊಂದರ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ಆದರೆ, ಅವರು ಆ ಮಾತನಾಡಿದ ಬಗ್ಗೆ ನಿಜಕ್ಕೂ ತುಂಬಾ ಬೇಸರ ಪಟ್ಟುಕೊಂಡಿರುತ್ತಾರೆ ಎಂಬುದು ನನ್ನ ಭಾವನೆಯಾಗಿದೆ” ಎಂದು ಅವರು ಹೇಳಿದ್ದಾರೆ.

ನೀವು ಮಸ್ಕ್ ರೊಂದಿಗೆ ಮತ್ತೆ ರಾಜಿ ಮಾಡಿಕೊಳ್ಳುತ್ತೀರಾ ಹಾಗೂ ನೀವು ಅವರನ್ನು ಕ್ಷಮಿಸುತ್ತೀರಾ ಎಂಬ ಪ್ರಶ್ನೆಗೆ, “ನಾನು ಹಾಗೆ ಮಾಡಬಲ್ಲೆ” ಎಂದು ಹೇಳುವ ಮೂಲಕ, ಅವರು ತಮ್ಮಿಬ್ಬರ ನಡುವೆ ರಾಜಿ ಸಾಧ್ಯತೆಯ ಸುಳಿವು ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಮೆರಿಕದ ಅಧ್ಯಕ್ಷರ ಕುರಿತು ತಾನು ಮಾಡಿರುವ ಪೋಸ್ಟ್‌ಗೆ ಎಲಾನ್‌ ಮಸ್ಕ್‌ ವಿಷಾದ ವ್ಯಕ್ತಪಡಿಸುವ ಮೊದಲೇ ಡೊನಾಲ್ಡ್ ಟ್ರಂಪ್ ಈ ಹೇಳಿಕೆ ನೀಡಿದ್ದರು ಎಂದು ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News