×
Ad

ತುರ್ಕಿಯಾದ ಮಿಲಿಟರಿ ಸರಕು ವಿಮಾನ ಪತನ; ಎಲ್ಲ 20 ಸೇನಾ ಸಿಬ್ಬಂದಿ ಮೃತ್ಯು

Update: 2025-11-12 17:16 IST

Photo Credit : AP

ಅಂಕಾರ: ಅಝರ್ಬೈಜಾನ್ನಿಂದ ತುರ್ಕಿಯಾದತ್ತ ಸಾಗುತ್ತಿದ್ದ ತುರ್ಕಿಯಾದ ಮಿಲಿಟರಿ ಸರಕು ವಿಮಾನ ಅಝರ್ಬೈಜಾನ್- ಜಾರ್ಜಿಯಾ ಗಡಿಭಾಗದಲ್ಲಿ ಮಂಗಳವಾರ ಪತನಗೊಂಡಿದ್ದು, ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲ 20 ಮಂದಿ ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ ತುರ್ಕಿಯಾ ರಕ್ಷಣಾ ಸಚಿವ ಯಾಸರ್ ಗುಲ್ಲರ್ ತಿಳಿಸಿದ್ದಾರೆ.

ಅಝರ್ ಬೈಜಾನ್ ನಿಂದ ತುರ್ಕಿಯಾದತ್ತ ಮರಳುತ್ತಿದ್ದ ಸಿ-130 ವಿಮಾನವು ಅಝರ್ ಬೈಜಾನ್ ಗಡಿ ಬಳಿಯ ಜಾರ್ಜಿಯಾದ ಸಿಘ್ನಾಘಿ ಮಹಾನಗರ ಪಾಲಿಕೆ ಬಳಿ ಮಂಗಳವಾರ ಪತನಗೊಂಡಿತ್ತು.

ಈ ಕುರಿತು ಎಕ್ಸ್ ನಲ್ಲಿ ಸಂದೇಶ ಹಂಚಿಕೊಂಡಿರುವ ತುರ್ಕಿಯಾ ರಕ್ಷಣಾ ಸಚಿವ ಯಾಸರ್ ಗುಲ್ಲರ್, “ಅಝರ್ ಬೈಜಾನ್ ನಿಂದ ನಮ್ಮ ದೇಶಕ್ಕೆ ಮರಳುತ್ತಿದ್ದ ಸಿ-130 ಮಿಲಿಟರಿ ಸರಕು ವಿಮಾನವು ಜಾರ್ಜಿಯಾ-ಅಝರ್ ಬೈಜಾನ್ ಗಡಿಯ ಬಳಿ ಮಂಗಳವಾರ ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ಸೇನೆಯಲ್ಲಿನ ನಮ್ಮ ವೀರ ಸೇನಾನಿಗಳು ಹುತಾತ್ಮರಾಗಿದ್ದಾರೆ” ಎಂದು ತಿಳಿಸಿದ್ದಾರೆ. ಈ ಪೋಸ್ಟ್ ನೊಂದಿಗೆ ಅವರು ಅಪಘಾತದಲ್ಲಿ ಮೃತಪಟ್ಟಿರುವ ಸೇನಾ ಸಿಬ್ಬಂದಿಗಳ ಭಾವಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

ಈ ಅಪಘಾತಕ್ಕೆ ಕಾರಣವೇನು ಎಂಬ ಕುರಿತು ತನಿಖೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News