×
Ad

ತುರ್ಕಿಯಾದ ಮಿಲಿಟರಿ ಸರಕು ವಿಮಾನ ಪತನ

Update: 2025-11-11 23:13 IST

ಅಂಕಾರ, ನ.11: ಅಝರ್ಬೈಜಾನ್ನಿಂದ ತುರ್ಕಿಯಾದತ್ತ ಸಾಗುತ್ತಿದ್ದ ತುರ್ಕಿಯಾದ ಮಿಲಿಟರಿ ಸರಕು ವಿಮಾನ ಅಝರ್ಬೈಜಾನ್- ಜಾರ್ಜಿಯಾ ಗಡಿಭಾಗದಲ್ಲಿ ಮಂಗಳವಾರ ಪತನಗೊಂಡಿರುವುದಾಗಿ ತುರ್ಕಿಯಾದ ರಕ್ಷಣಾ ಇಲಾಖೆ ಹೇಳಿದೆ.

ವಿಮಾನದಲ್ಲಿ 20 ಮಿಲಿಟರಿ ಸಿಬ್ಬಂದಿಗಳಿದ್ದು ಹೆಚ್ಚಿನ ಮಾಹಿತಿ ದೊರಕಿಲ್ಲ. ಅಜರ್ಬೈಜಾನ್ ಮತ್ತು ಜಾರ್ಜಿಯಾ ಅಧಿಕಾರಿಗಳ ನೆರವಿನೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತುರ್ಕಿಯಾದ ರಕ್ಷಣಾ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News