×
Ad

ಯುಎಇ: ಅಜ್ಮಾನ್‌ನ ಗಗನಚುಂಬಿ ಕಟ್ಟಡದಲ್ಲಿ ಬೆಂಕಿ ದುರಂತ

Update: 2023-06-27 23:34 IST

Photo: PTI

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನ ಅಜ್ಮಾನ್ ನಗರದಲ್ಲಿರುವ ಬಹುಮಹಡಿ ವಸತಿ ಸಂಕೀರ್ಣದಲ್ಲಿ ಮಂಗಳವಾರ ಬೆಳಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಕೈನ್ಯೂಸ್ ವರದಿ ಮಾಡಿದೆ.

ಅಜ್ಮಾನ್ ಒನ್ ವಸತಿ ಸಂಕೀರ್ಣದ 2ನೇ ಗೋಪುರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೆಲ ಅಂತಸ್ತಿನಿಂದ ಮೇಲಿನ ಮಹಡಿಯವರೆಗೆ ಹೊಗೆಯ ಕರಿಮೋಡ ಆವರಿಸಿರುವ ವೀಡಿಯೊವನ್ನು ಅಜ್ಮಾನ್ ಪೊಲೀಸರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಕಿಯನ್ನು ಕೆಲ ಗಂಟೆಗಳ ಕಾರ್ಯಾಚರಣೆಯಲ್ಲಿ ನಿಯಂತ್ರಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ಬಳಿಕ ಅಲ್ಲಿದ್ದ ನಿವಾಸಿಗಳನ್ನು 7 ಬಸ್ಸುಗಳ ಮೂಲಕ ಅಜ್ಮಾನ್ ಮತ್ತು ಶಾರ್ಜಾದಲ್ಲಿರುವ ಹೊಟೇಲ್‌ಗಳಿಗೆ ರವಾನಿಸಲಾಗಿದೆ. ಇದುವರೆಗಿನ ಮಾಹಿತಿ ಪ್ರಕಾರ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಅಜ್ಮಾನ್ ಪೊಲೀಸ್‌ನ ಕಾರ್ಯಾಚರಣೆ ವಿಭಾಗದ ಪ್ರಧಾನ ನಿರ್ದೇಶಕ ಬ್ರಿಗೇಡಿಯರ್ ಅಬ್ದುಲ್ಲಾ ಸೈಫ್ ಅಲ್ ಮತ್ರೂಷಿಯವರನ್ನು ಉಲ್ಲೇಖಿಸಿ ಖಲೀಜಾ ಟೈಮ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News