×
Ad

ದುಬೈ | ʼತವಕ್ಕಲ್ ಓವರ್ಸೀಸ್ʼ 30ನೇ ವಾರ್ಷಿಕ ಮಹಾಸಭೆ: ಅಶ್ಫಾಕ್ ಉಚ್ಚಿಲ ನೂತನ ಅಧ್ಯಕ್ಷ

ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಝಬೀಹ್, ಖಜಾಂಚಿಯಾಗಿ ಅಶ್ರಫ್ ಶೇಖ್ ಆಯ್ಕೆ

Update: 2026-01-20 16:00 IST

ದುಬೈ: ತವಕ್ಕಲ್ ಓವರ್ಸೀಸ್ ದುಬೈ ಇದರ 30ನೇ ವಾರ್ಷಿಕ ಮಹಾಸಭೆ ಶನಿವಾರ ಶಾರ್ಜಾದಲ್ಲಿ ನಡೆಯಿತು. ತನ್ವೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ 2026ರ ಅವಧಿಗೆ ನೂತನ ಅಧ್ಯಕ್ಷರಾಗಿ ಅಶ್ಫಾಕ್ ಉಚ್ಚಿಲ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಝಬೀಹ್ ಹಾಗೂ ಖಜಾಂಚಿಯಾಗಿ ಅಶ್ರಫ್ ಶೇಖ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ನೂತನ ಸಮಿತಿಯ ರಚನೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಶಮೀರ್ ಅಹ್ಮದ್, ಗೌರವಾಧ್ಯಕ್ಷರಾಗಿ ಮುಹಮ್ಮದ್ ದಾವೂದ್, ಜೊತೆ ಕಾರ್ಯದರ್ಶಿಯಾಗಿ ಹಸನ್ ಅದ್ದು, ಲೆಕ್ಕಪರಿಶೋಧಕರಾಗಿ ಅಬ್ದುಲ್ ಖಾದರ್ ಅವರನ್ನು ಆಯ್ಕೆ ಮಾಡಲಾಯಿತು. ಆಪ್(App) ಇನ್‌ಚಾರ್ಜ್ ಆಗಿ ಅಬ್ದುಲ್ ಅಝೀಮ್, ಸಾರ್ವಜನಿಕ ಸಂಪರ್ಕ (ಪಿಆರ್)(PR) ಇನ್‌ಚಾರ್ಜ್ ಆಗಿ ಅಬ್ದುಲ್ ರಝಾಕ್ ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರಾಗಿ ಇಲ್ಯಾಸ್ ಅಹ್ಮದ್, ಅಹ್ಮದ್ ಜಮಾಲ್, ಬಿಲಾಲ್ ಮುಹಮ್ಮದ್, ಇಮ್ತಿಯಾಝ್ ಉಡುಪಿ, ಶಾಹಿದ್ ನೆಜಾರ್, ತೌಶೀನ್, ರಾಹಿಲ್ ಅಹ್ಮದ್, ಜಿಯಾದ್ ಕಣ್ಣಗಾರ್, ಅದ್ನಾನ್ ದಳ್ವಾಯಿ, ರಫೀಕ್ ಕಟ್ಟಿಂಗೆರಿ ಹಾಗೂ ಹನೀಫ್ ಬಜ್ಪೆ ಆಯ್ಕೆಯಾದರು.

ಸಭೆಯಲ್ಲಿ ತವಕ್ಕಲ್‌ನ ನೂತನ ವೆಬ್‌ಸೈಟ್‌ಗೆ ತನ್ವೀರ್ ಅಹ್ಮದ್ ಅವರು ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಹನೀಫ್ ಬಜ್ಪೆ ಹಾಗೂ ಸಾಮಾಜಿಕ ಕಾರ್ಯಕರ್ತ ಸಮದ್ ಬಿರಾಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮುಹಮ್ಮದ್ ಝಾಹಿ ಇಸ್ಮಾಯಿಲ್ ಅವರು ಕಿರಾತ್ ಪಠಿಸಿದರು. ಮುಹಮ್ಮದ್ ಬಿಲಾಲ್ ಅತಿಥಿಗಳನ್ನು ಸ್ವಾಗತಿಸಿದರು. 2025ರ ವಾರ್ಷಿಕ ವರದಿ ಮಂಡನೆ ಹಾಗೂ ಅನುಮೋದನೆಯನ್ನು ಇಸ್ಮಾಯಿಲ್ ಝಬೀಹ್ ನೆರವೇರಿಸಿದರು. ಅಬ್ದುಲ್ ಅಝೀಮ್ ಅವರು 2025ರ ವಾರ್ಷಿಕ ಹಣಕಾಸು ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು. ಇದೇ ವೇಳೆ ನಿರ್ಗಮಿತ ಅಧ್ಯಕ್ಷ ಇಲ್ಯಾಸ್ ಅಹ್ಮದ್ ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಬ್ದುಲ್ ಅಝೀಮ್ ಅವರು ತವಕ್ಕಲ್‌ನ ನೂತನ ಆಪ್ ಪ್ರದರ್ಶನವನ್ನು ನಡೆಸಿಕೊಟ್ಟರು. ಮುಂದಿನ ಯೋಜನೆಗಳ ಕುರಿತು ಅಬ್ದುಲ್ ರಝಾಕ್ ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸಮದ್ ಬಿರಾಲಿ ಅವರನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ರಮೀನ್ ಅಬ್ದುಲ್ ರಝಾಕ್ ವಂದನಾರ್ಪಣೆ ಸಲ್ಲಿಸಿದರು.

 

 

 





 


 


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News