ಪದವೀಧರರಿಗೆ ಉದ್ಯೋಗ ಖಾತರಿಯ ತಿಳುವಳಿಕಾ ಒಪ್ಪಂದಕ್ಕೆ ಟಿಎಂಎಐಎಚ್ ಅಂಕಿತ
ಅಜ್ಮಾನ್: ಶಿಕ್ಷಣ ಹಾಗೂ ಉದ್ಯೋಗಾವಕಾಶದ ನಡುವಿನ ಅಂತರವನ್ನು ನಿವಾರಿಸುವ ನಿರ್ಣಾಯಕ ನಡೆಯೆಂಬಂತೆ, ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಅಧೀನದ ತುಂಬೆ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಎಐ ಇನ್ ಹೆಲ್ತ್‌ಕೇರ್ (the Thumbay College of Management and AI in Healthcare) ಸಂಸ್ಥೆಯು ತುಂಬೆ ಹೆಲ್ತ್‌ಕೇರ್ ಡಿವಿಜನ್ ಜೊತೆ ಆಯಕಟ್ಟಿನ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ.
ಈ ಒಪ್ಪಂದದ ಮೂಲಕ ಪದವೀಧರರಿಗೆ ಸಂರಚನಾತ್ಮಕ ಇಂಟರ್ನ್‌ಶಿಪ್‌ಗಳು,ಕೆಲಸದ ಸ್ಥಳದ ಅನುಭವ ಪಡೆಯಲಿದ್ದಾರೆ. ಈ ಪಾಲುದಾರಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಕಲಿಯುತ್ತಿರುವಾಗಲೇ ನೈಜವಾದ ಆಸ್ಪತ್ರೆ ಹಾಗೂ ಆರೋಗ್ಯಪಾಲನಾ ಉದ್ಯಮಿದ ಅನುಭವವನ್ನು ಪಡೆಯಲು ಸಾಧ್ಯವಾಗಲಿದೆ. ಈ ಒಪ್ಪಂದದ ಮೂಲಕ ತುಂಬೆ ಹೆಲ್ತ್‌ಕೇರ್, ಟಿಎಂಎಎಚ್‌ನ ಕನಿಷ್ಠ ಶೇ.20ರಷ್ಟು ಅರ್ಹ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ನೀಡಲಿದೆ.
ಈ ಸಂದರ್ಭ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕುಲಪತಿ ಪ್ರೊ. ಮಾಂಡ ವೆಂಕಟರಮಣ ಮಾತನಾಡಿ ‘‘ ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಗಳಿಸುವುದು ಮಾತ್ರಲ್ಲದೆ, ತಮ್ಮ ವೃತ್ತಿ ಬದುಕನ್ನು ಕೂಡಾ ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು. ಈ ತಿಳುವಳಿಕಾ ಒಪ್ಪಂದವು ಭವಿಷ್ಯದಲ್ಲಿ ಶಿಕ್ಷಣವನ್ನು ಉದ್ಯೋಗಾವಕಾಶವಾಗಿ ಹಾಗೂ ತರಗತಿಯ ಕೊಠಡಿಗಳನ್ನು ಆರೋಗ್ಯಪಾಲನಾ ಕೈಗಾರಿಕಾ ಕ್ಷೇತ್ರಕ್ಕೆ ಪ್ರವೇಶದ್ವಾರಗಳಾಗಿ ಪರಿವರ್ತಿಸಲಿದೆ’’ ಎಂದು ಟಿಎಂಎಐಎಚ್‌ನ ಡೀನ್ ಪ್ರೊ. ಆಮೀರ್ ಝೈದ್ ಹೇಳಿದರು.
ತುಂಬೆಗ್ರೂಪ್ ಹೆಲ್ತ್‌ಕೇರ್‌ನ ಉಪಾಧ್ಯಕ್ಷ ಅಕ್ಬರ್ ಮೊಯ್ದೀನ್ ತುಂಬೆ ಮಾತನಾಡಿ ಈ ತಿಳುವಳಿಕಾ ಒಪ್ಪಂದದ ಮೂಲಕ ತುಂಬೆ ಹೆಲ್ತ್‌ಕೇರ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಉದ್ಯೋಗಾವಕಾಶಗಳನ್ನು ತೆರೆದಿಡಲಿದೆ ಎಂದು ಹೇಳಿದರು.
ಈ ತಿಳುವಳಿಕಾ ಒಪ್ಪಂದವು ಒಂದೇ ಪರಿಸರ ವ್ಯವಸ್ಥೆಯಡಿ ಶಿಕ್ಷಣ, ಆರೋಗ್ಯಪಾಲನೆ ಹಾಗೂ ಸಂಶೋಧನೆಯನ್ನು ಏಕೀಕರಣಗೊಳಿಸುವ ತುಂಬೆ ಗ್ರೂಪ್‌ನ ಸುದೀರ್ಘ ಬದ್ಧತೆಯನ್ನು ಬಲಪಡಿಸಲಿದೆ.
ಕೋರ್ಸ್‌ಗಳಿಗೆ ಪ್ರವೇಶಗಳು ಆರಂಭಗೊಂಡಿದ್ದು, ಆಕಾಂಕ್ಷಿ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ gmu.ac.ae ಗೆ ಸಂದರ್ಶಿಸಬಹುದು. ಶೈಕ್ಷಣಿಕ ಅರ್ಹತೆ, ಸ್ಕಾಲರ್‌ಶಿಪ್ ಹಾಗೂ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕಗಳ ಬಗ್ಗೆ ಅರಿತುಕೊಳ್ಳಬಹುದು. ಆರೋಗ್ಯಪಾಲನೆ ಹಾಗೂ ಇಕಾನಾಮಿಕ್ಸ್‌ನಲ್ಲಿ ಬಿಎಸ್‌ಸಿ, ಹೆಲ್ತ್‌ಕೇರ್‌ನಲ್ಲಿ ಅನ್ವಯಿಕ ಎಐ, ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ, ಎಐ ಹಾಗೂ ಹೆಲ್ತ್ ಇನ್‌ಫಾರ್ಮಾಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.