×
Ad

ಸೌದಿ ಅರೇಬಿಯಾ| ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಅಕ್ಬರ್ ಅಲಿ ಇಬ್ರಾಹಿಂ ಮರು ಆಯ್ಕೆ

Update: 2026-01-24 18:45 IST

ಜುಬೈಲ್: ಸೌದಿ ಅರೇಬಿಯಾದ ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್​ (AQWA KSA) ಇದರ 40ನೇ ವಾರ್ಷಿಕ ಮಹಾಸಭೆಯು ಜುಬೈಲ್ ನ ಸಾಫ್ರೋನ್ ರೆಸ್ಟೋರೆಂಟ್ ನಲ್ಲಿ ಶುಕ್ರವಾರ ನಡೆಯಿತು.

ಸಂಸ್ಥೆಯ ಅಧ್ಯಕ್ಷರಾದ ಅಕ್ಬರ್ ಅಲಿ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಮಾಸ್ಟರ್ ಉಮ್ಮರ್ ಅಬ್ದುಲ್ಲಾ ಮತ್ತು ಮೊಹಮ್ಮದ್ ಅಮಾದ್ ಅವರು ಕಿರಾಅತ್‌ ಪಠಿಸುವ ಮೂಲಕ ವಾರ್ಷಿಕ ಮಹಾಸಭೆಯನ್ನು ಆರಂಭಿಸಲಾಯಿತು.

ಸ್ವಾಗತ ಮತ್ತು ಆಸನ ಸ್ವೀಕಾರ ಕಾರ್ಯಕ್ರಮವನ್ನು ಅಬ್ದುಲ್ ಕರೀಮ್ ಅವರು ನೆರವೇರಿಸಿ ಕೊಟ್ಟರು. ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿಯಾದ ಎಂ.ಇಸ್ಮಾಯಿಲ್ ಅಬ್ದುಲ್ಲಾ ವಾಚಿಸಿದರು. ಸಂಸ್ಥೆಯ ವಾರ್ಷಿಕ ಆಯವ್ಯಯವನ್ನು ಶಮೀಮ್ ಮೊಹಮ್ಮದ್ ಮಂಡಿಸಿದರು.


2026-27ನೇ ಸಾಲಿನ ಪದಾಧಿಕಾರಿಗಳನ್ನು ನೇಮಿಸಲು ಚುನಾವಣಾಧಿಕಾರಿಯಾಗಿ ಅಶ್ರಫ್ ಬೆಂಗಳೂರು ಅವರು ಸಹಕರಿಸಿದರು. ಈ ಸಂದರ್ಭದಲ್ಲಿ ಮೂಳೂರು ಜಮಾತಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಅನ್ವರ್ ಹುಸೇನ್ ಅವರನ್ನು ಸನ್ಮಾನಿಸಲಾಯಿತು.

ಈ ಬಾರಿಯ ಇಫ್ತಾರ್ ಕೂಟವನ್ನು ಫೆ.27ರಂದು ಜುಬೈಲ್ ನಲ್ಲಿ ಮಾಡುವುದೆಂದು ತೀರ್ಮಾನಿಸಲಾಯಿತು. ಫ್ಯಾಮಿಲಿ ಗೆಟ್ ಟುಗೆದರ್ ಮೇ 7ರಂದು ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಿ, ಇದರ ಸಂಪೂರ್ಣ ಉಸ್ತುವಾರಿ ಯನ್ನು ಅಶಿಲ್ ಅಕ್ಬರ್ ಮತ್ತು ಮೊಹಮ್ಮದ್ ಹುಸೇನ್ ತೀರ್ಥಹಳ್ಳಿ ಅವರಿಗೆ ನೀಡಲಾಯಿತು.


ವಾರ್ಷಿಕ ಮಹಾಸಭೆಯ ಕಾರ್ಯಕ್ರಮದ ನಿರೂಪಣೆಯನ್ನು ಅಬ್ದುಲ್ ಕರೀಮ್ ನೆರವೇರಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ಅಬ್ದುಲ್ಲಾ ವಂದಿಸಿದರು.

ನೂತನ ಪದಾಧಿಕಾರಿಗಳು:- ಅಧ್ಯಕ್ಷರಾಗಿ ಅಕ್ಬರ್ ಅಲಿ ಇಬ್ರಾಹಿಂ, ಉಪಾಧ್ಯಕ್ಷರಾಗಿ ಜುಬೈಲ್ ವಲಯ-ಅಮಾನ್  ಮುರಾದ್ ಅಲಿ, ದಮ್ಮಾಮ್ ಮತ್ತು ಕೋಬರ್ ವಲಯ -ತಸ್ಮೀರ್ ತಾಜು, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಇಸ್ಮಾಯಿಲ್ ಅಬ್ದುಲ್ಲಾ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ವಹಾಬ್, ಕೋಶಾಧಿಕಾರಿಯಾಗಿ ಶಮೀಮ್ ಮೊಹಮ್ಮದ್, ಜೊತೆ ಕೋಶಾಧಿಕಾರಿಯಾಗಿ ಸದರುದ್ದೀನ್ ಆಜಬ್ಬ, ಲೆಕ್ಕ ಪರಿಶೋಧಕರಾಗಿ ಮೊಹಮ್ಮದ್ ಅಲಿ, ಗೌರವ ಅಧ್ಯಕ್ಷರಾಗಿ ಮೊಹಮ್ಮದ್ ಸಿದ್ದೀಕ್ ಶಂಶುದ್ದೀನ್, ಹಿರಿಯ ಸಲಹೆಗಾರರಾಗಿ ಅಬ್ದುಲ್ ಕರೀಮ್, ಅಬ್ದುಲ್ ಅಂಖಾಲಿಕ್, ಅಬ್ದುಲ್ ಅಝೀಝ್, ಹಾರಿಸ್ ಯೂಸುಫ್, ಸಂಸ್ಥೆಯ ಊರಿನ ಪ್ರತಿನಿಧಿಯಾಗಿ ಮುರಾದ್ ಅಲಿ ಅವರನ್ನು ನೇಮಕ ಮಾಡಲಾಯಿತು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News