×
Ad

ಜನಾಂಗೀಯ ನಿಂದನೆ: ಬ್ರಿಟನ್ ಸಂಸದನಿಗೆ ದಂಡ

Update: 2023-11-04 22:41 IST

ಸಾಂದರ್ಭಿಕ ಚಿತ್ರ

ಲಂಡನ್, ನ.4: ಜನಾಂಗೀಯ ನಿಂದನೆಯ ಆರೋಪ ಸಾಬೀತಾಗಿರುವುದರಿಂದ ಬ್ರಿಟನ್ ನ ಕನ್ಸರ್ವೇಟಿವ್ ಪಕ್ಷದ ಸಂಸದ ಬಾಬ್ ಸ್ಟಿವರ್ಟ್ ಗೆ ಲಂಡನ್ ನ ನ್ಯಾಯಾಲಯ 743 ಡಾಲರ್ ಹಾಗೂ ದಂಡ ವಿಧಿಸುವಂತೆ ಆದೇಶಿಸಿದೆ.

ಕಳೆದ ವರ್ಷದ ಡಿಸೆಂಬರ್ನಲ್ಲಿ ಲಂಡನ್ನಲ್ಲಿರುವ ಬಹ್ರೇನ್ ರಾಯಭಾರಿ ಕಚೇರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸ್ಟಿವರ್ಟ್ ಪಾಲ್ಗೊಂಡಿದ್ದರು. ಆಗ ಕಚೇರಿಯ ಹೊರಗಡೆ ಪ್ರತಿಭಟನೆ ನಡೆಸಿದ್ದ ಮಾನವ ಹಕ್ಕುಗಳ ಕಾರ್ಯಕರ್ತ ಸಯದ್ ಅಹ್ಮದ್ ಸ್ಟಿವರ್ಟ್ರನ್ನು ಉದ್ದೇಶಿಸಿ ‘ಬಾಬ್ ಸ್ಟಿವರ್ಟ್, ಬಹ್ರೇನ್ ಆಡಳಿತಕ್ಕೆ ಎಷ್ಟು ಮೊತ್ತಕ್ಕೆ ನಿಮ್ಮನ್ನು ಮಾರಿಕೊಂಡಿದ್ದೀರಿ’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಟಿವರ್ಟ್ ‘ನಿಮ್ಮಂತವರು ನಮ್ಮ ದೇಶದ ಹಣವನ್ನು ಕೊಂಡೊಯ್ಯುತ್ತಿದ್ದೀರಿ. ಇಲ್ಲಿಂದ ತೊಲಗಿ.. ನಿಮ್ಮನ್ನು ದ್ವೇಷಿಸುತ್ತೇನೆ. ಬಹ್ರೇನ್ಗೆ ಹಿಂತಿರುಗಿ’ ಎಂದು ಉತ್ತರಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸ್ಟಿವರ್ಟ್ಗೆ ದಂಡ ವಿಧಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News