ಅಮೆರಿಕದ ನ್ಯಾಯಾಲಯದಲ್ಲಿ ಮಡುರೊ ದಂಪತಿ ವಿಚಾರಣೆ: ಯುಎಸ್ ಅಟಾರ್ನಿ ಜನರಲ್ ಘೋಷಣೆ
Update: 2026-01-03 23:27 IST
ನಿಕೊಲಸ್ ಮಡುರೊ | Photo Credit : NDTV
ವಾಶಿಂಗ್ಟನ್, ಜ. 3: ವೆನೆಝುವೆಲದ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ನ್ಯೂಯಾರ್ಕ್‌ನಲ್ಲಿ ನ್ಯಾಯಾಂಗ ವಿಚಾರಣೆ ಎದುರಿಸಲಿದ್ದಾರೆ ಎಂದು ಅಮೆರಿಕದ ಅಟಾರ್ನಿ ಜನರಲ್ ಪ್ಯಾಮ್ ಬೊಂಡಿ ಹೇಳಿದ್ದಾರೆ. ‘‘ವೆನೆಝುವೆಲದ ದಂಪತಿಯು ಶೀಘ್ರದಲ್ಲೇ ಅಮೆರಿಕದ ನೆಲದಲ್ಲಿ, ಅಮೆರಿಕದ ನ್ಯಾಯಾಲಯಗಳಲ್ಲಿ ಅಮೆರಿಕದ ಕಾನೂನಿನ ಪೂರ್ಣ ಕ್ರೋಧವನ್ನು ಎದುರಿಸಲಿದ್ದಾರೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಅವರು ತಿಳಿಸಿದ್ದಾರೆ.
‘‘ನಿಕೊಲಸ್ ವಿರುದ್ಧ ಅಮೆರಿಕದಲ್ಲಿ ಮಾದಕ ದ್ರವ್ಯ-ಭಯೋತ್ಪಾದನೆ ಪಿತೂರಿ, ಕೊಕೇನ್ ಆಮದು ಪಿತೂರಿ, ಮಶಿನ್‌ಗನ್‌ಗಳು ಮತ್ತು ವಿನಾಶಕಾರಿ ಸಲಕರಣೆಗಳನ್ನು ಹೊಂದಿರುವ ಹಾಗೂ ಅಮೆರಿಕದ ವಿರುದ್ಧ ಬಳಕೆಗಾಗಿ ಮಶಿನ್‌ಗನ್‌ಗಳು ಮತ್ತು ವಿನಾಶಕಾರಿ ಸಲಕರಣೆಗಳನ್ನು ಹೊಂದಲು ನಡೆಸಿದ ಪಿತೂರಿಗೆ ಸಂಬಂಧಿಸಿದ ಮೊಕದ್ದಮೆಗಳು ದಾಖಲಾಗಿವೆ’’ ಎಂದು ಅವರು ಹೇಳಿದ್ದಾರೆ.