Venezuela | ಏನೆಲ್ಲಾ ಬೆಳವಣಿಗೆಗಳು ನಡೆಯಿತು?
Photo Credit : AP \ PTI
ವಾಷಿಂಗ್ಟನ್: ಮಡುರೊರನ್ನು ಹೊತ್ತ ವಿಮಾನವು ಶನಿವಾರ ತಡರಾತ್ರಿ ನ್ಯೂಯಾರ್ಕ್ ನಗರದ ಬಳಿ ಲ್ಯಾಂಡ್ ಆಗಿದ್ದು, ಅಲ್ಲಿಂದ ಅವರನ್ನು ಹೆಲಿಕಾಪ್ಟರ್ ಮೂಲಕ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಮೆಟ್ರೊಪಾಲಿಟನ್ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
► ಮಡುರೊ ವಿರುದ್ಧ ಮಾದಕ ವಸ್ತು ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ಪ್ರಕರಣ ದಾಖಲಿಸಲಾಗಿದೆ. ಸೋಮವಾರ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಪ್ರಾಥಮಿಕ ವಿಚಾರಣೆಗೆ ಹಾಜರಾಗುವ ನಿರೀಕ್ಷೆಯಿದೆ.
► ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗಸ್‌ಗೆ ವೆನೆಝುವೆಲಾದ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
► ವಿಪಕ್ಷದ ಅಭ್ಯರ್ಥಿಯೇ ಮಧ್ಯಂತರ ಅಧ್ಯಕ್ಷರಾಗಬೇಕು ಎಂದು ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ಆಗ್ರಹಿಸಿದ್ದಾರೆ.
► ಮಡುರೊ ಅವರನ್ನು ಅಪಹರಿಸಲಾಗಿದೆ ಎಂದು ವೆನೆಝುವೆಲಾದ ಕೆಲವರು ಖಂಡಿಸಿದ್ದರೆ, ಇನ್ನೂ ಕೆಲವರು ಸಂಭ್ರಮಾಚರಿಸಿರುವುದಾಗಿ ವರದಿಯಾಗಿದೆ.
► ಮಧ್ಯರಾತ್ರಿಯಿಂದ ಕೆರಿಬಿಯನ್ ವಾಯುಪ್ರದೇಶದ ಮೂಲಕ ವಿಮಾನ ಸಂಚಾರವನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ.