×
Ad

ರಷ್ಯಾದಿಂದ ತೈಲ ಖರೀದಿ| ಭಾರತದ ಮೇಲೆ ಮತ್ತಷ್ಟು ಸುಂಕ ವಿಧಿಸುವ ಸುಳಿವು ನೀಡಿದ ಟ್ರಂಪ್

“ನಾನು ಸಂತೋಷವಾಗಿಲ್ಲ ಎಂದು ಪ್ರಧಾನಿ ಮೋದಿಗೆ ತಿಳಿದಿದೆ”

Update: 2026-01-05 10:35 IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)

ಹೊಸದಿಲ್ಲಿ: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತಿರುವ ಭಾರತದ ಮೇಲೆ ಹೊಸ ಸುಂಕಗಳನ್ನು ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. “ನಾವು ಅತೃಪ್ತರಾಗಿದ್ದೇವೆಂದು ಅವರಿಗೆ ತಿಳಿದಿದೆ" ಎಂದು ಹೇಳಿದರು.

ರವಿವಾರ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ಬಹಳ ಒಳ್ಳೆಯ ವ್ಯಕ್ತಿ. ನಾನು ಸಂತೋಷವಾಗಿಲ್ಲ ಎಂದು ಅವರಿಗೆ ತಿಳಿದಿದೆ. ನನ್ನನ್ನು ಸಂತೋಷಪಡಿಸುವುದು ಮುಖ್ಯವಾಗಿತ್ತು. ಅವರು ವ್ಯಾಪಾರ ಮುಂದುವರಿಸಿದ್ದಾರೆ ಮತ್ತು ನಾವು ಅವರ ಮೇಲೆ ಶೀಘ್ರದಲ್ಲೇ ಸುಂಕವನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ.

ಕಳೆದ ವರ್ಷ ಟ್ರಂಪ್ ಅವರು ಭಾರತದ ಮೇಲೆ 25 ಪ್ರತಿಶತ ಸುಂಕವನ್ನು ಮತ್ತು ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಹೆಚ್ಚುವರಿಯಾಗಿ 25 ಪ್ರತಿಶತ ಸುಂಕವನ್ನು ವಿಧಿಸಿದ್ದರು. ಭಾರತದ ಮೇಲೆ ಒಟ್ಟು 50% ಸುಂಕವನ್ನು ವಿಧಿಸಿದ್ದರು. ಈ ನಿರ್ಧಾರದಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹಳಸಿತ್ತು.

ಇತ್ತೀಚೆಗೆ ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಯನ್ನು ನಡೆಸಿದ್ದರು. ಇದಾದ ಕೆಲವೇ ವಾರಗಳ ಬಳಿಕ ಟ್ರಂಪ್ ಮತ್ತೆ ಸುಂಕ ಹೆಚ್ಚಳದ ಸುಳಿವು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News