ಅಮೆರಿಕ | 43 ವರ್ಷ ತಪ್ಪಾಗಿ ಜೈಲಿನಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯ ಗಡೀಪಾರಿಗೆ ತಡೆ
Photo: timesofindia
ನ್ಯೂಯಾರ್ಕ್, ನ.4: ಕೊಲೆ ಪ್ರಕರಣದಲ್ಲಿ 43 ವರ್ಷ ಜೈಲಿನಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯ ಮೇಲಿದ್ದ ದೋಷಾರೋಪವನ್ನು ನ್ಯಾಯಾಲಯ ರದ್ದುಗೊಳಿಸಿದ ಬಳಿಕ ಅವರನ್ನು ಗಡೀಪಾರು ಮಾಡುವುದಕ್ಕೆ ಅಮೆರಿಕದ ಎರಡು ನ್ಯಾಯಾಲಯಗಳು ತಡೆಯಾಜ್ಞೆ ನೀಡಿವೆ.
1980ರಲ್ಲಿ ಭಾರತೀಯ ಮೂಲದ ಸುಬ್ರಮಣ್ಯಮ್ ಅವರನ್ನು(64 ವರ್ಷ) ಸ್ನೇಹಿತನನ್ನು ಕೊಲೆ ಮಾಡಿದ ಆಪಾದನೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಆದರೆ 43 ವರ್ಷಗಳ ಬಳಿಕ, ಈ ವರ್ಷದ ಆರಂಭದಲ್ಲಿ ದೋಷಾರೋಪವನ್ನು ರದ್ದುಗೊಳಿಸಿ ಜೈಲಿನಿಂದ ಬಿಡುಗಡೆಗೊಂಡರೂ ಅಕ್ಟೋಬರ್ 3ರಂದು ವಲಸೆ ಮತ್ತು ಕಸ್ಟಮ್ಸ್ ಅನುಷ್ಠಾನ ಬ್ಯೂರೋ ನೇರವಾಗಿ ಕಸ್ಟಡಿಗೆ ಪಡೆದಿತ್ತು. ಸುಬ್ರಮಣ್ಯಮ್ 20 ವರ್ಷದವರಿದ್ದಾಗ ಅವರ ವಿರುದ್ಧ ದಾಖಲಾಗಿದ್ದ ಮಾದಕ ದ್ರವ್ಯ ಪೂರೈಕೆ ಆರೋಪದಡಿ ಅವರನ್ನು ಗಡೀಪಾರು ಮಾಡಲು ವಲಸೆ ಏಜೆನ್ಸಿ ಬಯಸಿತ್ತು. ಅದನ್ನು ಪ್ರಶ್ನಿಸಿ ಸುಬ್ರಮಣ್ಯಮ್ ಮೇಲ್ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ಮುಗಿಯುವರೆಗೆ ಗಡೀಪಾರು ಮಾಡದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗಿದೆ.