ಇರಾನ್ ಜೊತೆಗಿನ ಯುದ್ಧದಿಂದ ಅಮೆರಿಕ ದುರ್ಬಲ: ಸಂಸದ ಥಾಮಸ್ ಮಾಸ್ಸಿ ಆರೋಪ

Update: 2026-07-27 08:20 IST

ಥಾಮಸ್ ಮಾಸ್ಸಿ Photo: x.com/RepThomasMassie

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದಲ್ಲಿ ಟ್ರಂಪ್ ಆಡಳಿತವು ದೇಶದ ಸ್ಥಿರತೆ ಮತ್ತು ಸಂಪನ್ಮೂಲಗಳಿಗೆ ತೀವ್ರ ಹಾನಿ ಉಂಟುಮಾಡಿದೆ ಎಂದು ಅಮೆರಿಕದ ಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್)ಯ ಸಂಸದ ಥಾಮಸ್ ಮಾಸ್ಸಿ ಆರೋಪಿಸಿದ್ದಾರೆ.

"ಇರಾನ್ ಜೊತೆಗಿನ ಯುದ್ಧದಿಂದಾಗಿ ಅಮೆರಿಕ ಗಮನಾರ್ಹವಾಗಿ ದುರ್ಬಲಗೊಂಡಿದೆ" ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

"ಈ ಆಡಳಿತವು ನಮ್ಮ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖಾಲಿ ಮಾಡಿದೆ. ತೈಲ ಸಂಗ್ರಹವನ್ನು ಬರಿದುಗೊಳಿಸಿದೆ. ನಮ್ಮ ಯೋಧರನ್ನು ಬಲಿಕೊಟ್ಟಿದೆ. ದಿನನಿತ್ಯದ ವಸ್ತುಗಳ ಬೆಲೆ ಹೆಚ್ಚಿಸಿದೆ. ಸಾಲದ ಹೊರೆಯನ್ನು ಏರಿಸಿದೆ ಮತ್ತು ನಮ್ಮ ದೇಶದ ಆಂತರಿಕ ಅಗತ್ಯಗಳನ್ನು ನಿರ್ಲಕ್ಷಿಸಿದೆ. ಇದೆಲ್ಲವನ್ನೂ ಇಸ್ರೇಲ್‌ಗಾಗಿ ಮಾಡಲಾಗಿದೆ" ಎಂದು ಅವರು ಕಿಡಿಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News