ಅಮೆರಿಕದ ಸಿಯಾಟಲ್ ಆಹಾರ ಮೇಳದಲ್ಲಿ ಗುಂಡಿನ ದಾಳಿ: ಇಬ್ಬರು ಮೃತ್ಯು, ಐವರಿಗೆ ಗಾಯ

Update: 2026-07-27 12:03 IST

Screengrab: X/@theinformant_x

ವಾಷಿಂಗ್ಟನ್: ಅಮೆರಿಕದ ಸಿಯಾಟಲ್ ನಲ್ಲಿ ನಡೆಯುತ್ತಿದ್ದ ಆಹಾರ ಮೇಳದಲ್ಲಿ ನಡೆದ ಸರಣಿ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟು, ಐದು ಜನರು ಗಾಯಗೊಂಡಿದ್ದಾರೆ.

ನೂರಾರು ಸ್ಥಳೀಯ ಆಹಾರ ಮಾರಾಟಗಾರರು ಮತ್ತು ಸಂಗೀತ ಪ್ರದರ್ಶನಗಳನ್ನು ಒಳಗೊಂಡಿದ್ದ ವಾರ್ಷಿಕ ಬೈಟ್ ಆಫ್ ಸಿಯಾಟಲ್ ಮೇಳವು ಸಿಯಾಟಲ್ ಸೆಂಟರ್ನಲ್ಲಿ ಆಯೋಜಿಸಿಲಾಗಿತ್ತು. ನಗರದ ಪ್ರಸಿದ್ಧ ಸ್ಪೇಸ್ ನೀಡಲ್ ಟವರ್ ಸಮೀಪ ನಡೆಯುತ್ತಿದ್ದ ಈ ಮೇಳದಲ್ಲಿ ಸ್ಥಳೀಯ ಕಾಲಮಾನ ಸಂಜೆ 6 ಗಂಟೆಯ ಸುಮಾರಿಗೆ ದಿಢೀರ್ ಗುಂಡಿನ ದಾಳಿ ನಡೆದಿದೆ.

ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟು, ಐದು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗಾಯಾಳುಗಳನ್ನು ಹಾರ್ಬರ್ವ್ಯೂ ಮೆಡಿಕಲ್ ಸೆಂಟರ್ಗೆ ದಾಖಲಿಸಲಾಗಿದೆ ಎಂದು ಸಿಯಾಟಲ್ ಟೈಮ್ಸ್ ವರದಿ ಮಾಡಿದೆ.

“ಸಿಯಾಟಲ್ ಸೆಂಟರ್ ನಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬರಲಿದೆ. ದಯವಿಟ್ಟು ಸಾರ್ವಜನಿಕರು ಈ ಪ್ರದೇಶಕ್ಕೆ ತೆರಳಬೇಡಿ”ಎಂದು ಸಿಯಾಟಲ್ ಪೊಲೀಸ್ ಇಲಾಖೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವೀಡಿಯೋ ತುಣುಕುಗಳು ಹೊರಬಿದ್ದಿದ್ದು, ಜನದಟ್ಟಣೆಯಿದ್ದ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಸಿದ ಕ್ಷಣ ಮತ್ತು ಆ ನಂತರ ಉಂಟಾದ ಕಾಲ್ತುಳಿತ, ಗೊಂದಲದ ವಾತಾವರಣ ವೀಡಿಯೋದಲ್ಲಿ ಕಂಡುಬಂದಿದೆ.

ಘಟನಾ ಸ್ಥಳದಲ್ಲಿ ಕನಿಷ್ಠ ಏಳರಿಂದ ಎಂಟು ಬಾರಿ ಗುಂಡಿನ ಸದ್ದು ಕೇಳಿಸಿದೆ. ಆಹಾರಕ್ಕಾಗಿ ಜನರ ಸಾಲುಗಳು ಕಿಕ್ಕಿರಿದು ತುಂಬಿದ್ದ ಕಾರಣ ಜನರಿಗೆ ಸರಿಯಾಗಿ ಓಡಾಡಲೂ ಸಾಧ್ಯವಾಗಲಿಲ್ಲ ಸಿಯಾಟಲ್ ಟೈಮ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News