×
Ad

ಅಮೆರಿಕದ ದಾಳಿಗಳು ಇರಾನ್‌ ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಧ್ವಂಸಗೊಳಿಸಿವೆ: ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್

Update: 2025-06-22 18:16 IST

PC | REUTERS

ವಾಷಿಂಗ್ಟನ್: ಅಮೆರಿಕ ಮಾಡಿದ ವೈಮಾನಿಕ ದಾಳಿಯು ಇರಾನಿನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಧ್ವಂಸಗೊಳಿಸಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ ಎಂದು Aljabzeera ವರದಿ ಮಾಡಿದೆ.

ರವಿವಾರ ಪೆಂಟಗನ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇರಾನ್‌ನ ಪರಮಾಣು ತಾಣಗಳ ಮೇಲೆ ಅಮೆರಿಕ ಮಾಡಿದ ದಾಳಿಗಳು ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ ಎಂದರು. ಆದರೆ ಈ ಕುರಿತು ಯಾವುದೇ ವಿವರಗಳನ್ನು ನೀಡಲು ರಕ್ಷಣಾ ಕಾರ್ಯದರ್ಶಿ ನಿರಾಕರಿಸಿದರು.

"ನಮ್ಮ ಕಮಾಂಡರ್-ಇನ್-ಚೀಫ್ ಟ್ರಂಪ್ ಅವರಿಂದ ನಮಗೆ ಬಂದ ಆದೇಶವು ಕೇಂದ್ರೀಕೃತವಾಗಿತ್ತು. ಅದು ಶಕ್ತಿಯುತವಾಗಿತ್ತು ಮತ್ತು ಸ್ಪಷ್ಟವಾಗಿತ್ತು. ಅದರಂತೆ ನಾವು ಇರಾನಿನ ಪರಮಾಣು ಕಾರ್ಯಕ್ರಮವನ್ನು ಧ್ವಂಸಗೊಳಿಸಿದ್ದೇವೆ", ಎಂದು ಅವರು ಪೆಂಟಗನ್‌ನಲ್ಲಿ ವರದಿಗಾರರಿಗೆ ತಿಳಿಸಿದರು.

ಇರಾನ್ ಮೇಲಿನ ದಾಳಿಯು ಒಂದು ದಿನದ ಯೋಜನೆಯನಲ್ಲ. ತಿಂಗಳುಗಳು ಮತ್ತು ವಾರಗಳ ಕಾಲ ಇದಕ್ಕೆ ನಾವು ಸಿದ್ಧತೆಯನ್ನು ಮಾಡಿದ್ದೇವೆ. ಆದ್ದರಿಂದ ಅಮೆರಿಕದ ಅಧ್ಯಕ್ಷರು ಆದೇಶ ನೀಡಿದಾಗ ನಾವು ಸಿದ್ಧರಾಗಿದ್ದೆವು, ಎಂದು ಅವರು ವರದಿಗಾರರಿಗೆ ತಿಳಿಸಿದರು.

ಇರಾನ್‌ನಲ್ಲಿ ಆಡಳಿತದ ಬದಲಾವಣೆಗಾಗಿ ಅಮೆರಿಕವೇನಾದರೂ ದಾಳಿ ನಡೆಸಿದೆಯೇ ಎಂದು ಕೇಳಿದಾಗ, ಈ ದಾಳಿಯು ಆಡಳಿತ ಬದಲಾವಣೆಗಾಗಿ ಮಾಡಿರಲಿಲ್ಲ. ಇರಾನಿನ ಪರಮಾಣು ಕಾರ್ಯಕ್ರಮದಿಂದ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಒಡ್ಡಲಾದ ಬೆದರಿಕೆಗಳನ್ನು ತಟಸ್ಥಗೊಳಿಸಲು ಮಾಡಿದ ನಿಖರವಾದ ಕಾರ್ಯಾಚರಣೆ ಇದಾಗಿತ್ತು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News