×
Ad

ವೆನೆಝುವೆಲಾದ ಮತ್ತೊಂದು ತೈಲ ಟ್ಯಾಂಕರ್ ವಶಕ್ಕೆ ಪಡೆದ ಅಮೆರಿಕಾ: ವರದಿ

Update: 2025-12-21 22:26 IST

Photo : Meta AI

ವಾಷಿಂಗ್ಟನ್: ಅಮೆರಿಕಾದ ಪಡೆಗಳು ಕ್ಯಾರಿಬಿಯನ್ ಸಮುದ್ರದಲ್ಲಿ ವೆನೆಝುವೆಲಾದ ಮತ್ತೊಂದು ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿರುವುದಾಗಿ ಅಮೆರಿಕಾದ ಆಂತರಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ಕ್ರಿಸ್ತಿ ನೊಯೆಮ್ ದೃಢಪಡಿಸಿದ್ದಾರೆ.

ರಕ್ಷಣಾ ಇಲಾಖೆಯ ನೆರವಿನೊಂದಿಗೆ ಅಮೆರಿಕಾದ ಕರಾವಳಿ ಕಾವಲು ಪಡೆ ಶನಿವಾರ ಎರಡನೇ ತೈಲ ಟ್ಯಾಂಕರನ್ನು ವಶಪಡಿಸಿಕೊಂಡಿದೆ. ತಮ್ಮ ದೇಶದಲ್ಲಿನ ಮಾದಕ ವಸ್ತು ಕಳ್ಳಸಾಗಣೆ ಜಾಲದ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ವೆನೆಝುವೆಲಾದ ಆಡಳಿತದ ಮೇಲೆ ನಡೆಯುತ್ತಿರುವ ಒತ್ತಡದ ಮುಂದುವರಿದ ಭಾಗ ಇದಾಗಿದೆ. ಈ ಪ್ರದೇಶದಲ್ಲಿ ಮಾದಕ ವಸ್ತು- ಭಯೋತ್ಪಾದನೆಗೆ ಧನ ಸಹಾಯ ಒದಗಿಸಲು ಬಳಸಲಾಗುವ ನಿರ್ಬಂಧಿತ ತೈಲದ ಅಕ್ರಮ ಸಾಗಣೆಯನ್ನು ಗುರಿಯಾಗಿಸಿ ಅಮೆರಿಕಾ ನಡೆಸುತ್ತಿರುವ ದಾಳಿ ಮುಂದುವರಿಯಲಿದೆ' ಎಂದವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಅಮೆರಿಕಾದ ಕ್ರಮವನ್ನು ವೆನೆಝುವೆಲಾ ಸರಕಾರ ಖಂಡಿಸಿದ್ದು ಅಮೆರಿಕಾ ಕ್ರಮಗಳ ಕಾನೂನುಬಾಹಿರತೆಯನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೋರಿಸಲು ಎಲ್ಲಾ ಪ್ರಕ್ರಿಯೆಗಳನ್ನೂ ಕೈಗೊಳ್ಳುವುದಾಗಿ ಪಣತೊಟ್ಟಿದೆ. ಅಮೆರಿಕಾಕ್ಕೆ ಮಾದಕ ವಸ್ತುಗಳ ಕಳ್ಳಸಾಗಣೆಗೆ ಮತ್ತು ಭಯೋತ್ಪಾದನೆಗೆ ಧನಸಹಾಯ ನೀಡಲು ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಆಡಳಿತವು ತೈಲ ಆದಾಯವನ್ನು ಬಳಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಆಪಾದಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News