×
Ad

ಚುನಾವಣೆ ವಿಳಂಬಗೊಂಡರೆ ರಾಷ್ಟ್ರವ್ಯಾಪಿ ಪ್ರತಿಭಟನೆ: ನೇಪಾಳದ ಮಾಜಿ ಪ್ರಧಾನಿ ಎಚ್ಚರಿಕೆ

Update: 2025-12-21 23:19 IST

ನೇಪಾಳದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ - photo credit : telegraphindia

ಕಠ್ಮಂಡು: ನೇಪಾಳದಲ್ಲಿ ಮಾರ್ಚ್ 5ರಂದು ನಿಗದಿಗೊಂಡಿರುವ ಸಾರ್ವತ್ರಿಕ ಚುನಾವಣೆಯನ್ನು ವಿಳಂಬಿಸಿದರೆ ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ `ಪ್ರಚಂಡ' ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ರಚನೆಯಾದ ನೇಪಾಳಿ ಕಮ್ಯುನಿಸ್ಟ್ ಪಾರ್ಟಿ(ಎನ್ಸಿಪಿ)ಯ ಸಂಯೋಜಕರಾಗಿರುವ `ಪ್ರಚಂಡ' ಕಠ್ಮಂಡುವಿನಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಹಾಳು ಮಾಡಲು ಪ್ರತಿಗಾಮಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಭದ್ರತಾ ಕಾಳಜಿ, ಈಗ ನಡೆಯುತ್ತಿರುವ ರಾಜಪ್ರಭುತ್ವದ ಪರವಾದ ಪ್ರದರ್ಶನಗಳನ್ನು ನೆಪವಾಗಿಸಿ ಚುನಾವಣೆ ಮುಂದೂಡುವುದನ್ನು ತಮ್ಮ ಪಕ್ಷ ಬಲವಾಗಿ ವಿರೋಧಿಸುತ್ತದೆ ಎಂದವರು ಹೇಳಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News