ವಿದ್ಯುತ್ ಕಡಿತದಿಂದ ತತ್ತರಿಸಿದ ಸ್ಯಾನ್ ಫ್ರಾನ್ಸಿಸ್ಕೋ
Photo : X
ನ್ಯೂಯಾರ್ಕ್: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಶನಿವಾರ ಭಾರೀ ವಿದ್ಯುತ್ ಕಡಿತ ಸಂಭವಿಸಿದ್ದು ಸುಮಾರು 1,30,000 ಜನರು ವಿದ್ಯುತ್ ಪೂರೈಕೆಯಿಲ್ಲದೆ ತೊಂದರೆಗೊಳಗಾದರು ಎಂದು ವರದಿಯಾಗಿದೆ.
8 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ `ಟೆಕ್ಹಬ್' ( ತಂತ್ರಜ್ಞಾನ ಕೇಂದ್ರ)ಸ್ಯಾನ್ ಫ್ರಾನ್ಸಿಸ್ಕೋ ಹೆಚ್ಚಿನ ಭಾಗಗಳು ಕಗ್ಗತ್ತಲೆಯಲ್ಲಿ ಮುಳುಗಿದ್ದು ಹೆಚ್ಚಿನ ಟ್ರಾಫಿಕ್ ಲೈಟ್ ಸ್ಥಗಿತಗೊಂಡ ಕಾರಣ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ತೊಡಕಾಗಿದೆ. ಕೆಲವು ವ್ಯಾಪಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಕೆಲವು ಟ್ರಾಫಿಕ್ ಸಿಗ್ನಲ್ ಗಳು ನಿಷ್ಕ್ರಿಯಗೊಂಡಿದ್ದು ಮಳೆಯೂ ಬರುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಅಗತ್ಯ ಬಿದ್ದರೆ ಮಾತ್ರ ಮನೆಯಿಂದ ಹೊರ ತೆರಳಬೇಕು ಎಂದು ನಗರದ ಮೇಯರ್ ಡೇನಿಯಲ್ ಲ್ಯೂರಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ನಿರಂತರ ಕಾರ್ಯಾಚರಣೆಯ ಬಳಿಕ ಸುಮಾರು 95,000 ಜನರಿಗೆ ವಿದ್ಯುತ್ ಸಂಪರ್ಕ ಮರುಕಲ್ಪಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.