×
Ad

ಅಸಭ್ಯ ಪದ ಬಳಕೆ ; ಕ್ಷಮೆ ಯಾಚಿಸಿದ ಬ್ರಿಟನ್ ಸಚಿವೆ

Update: 2023-09-05 23:10 IST

ಬ್ರಿಟನ್‍ ಶಿಕ್ಷಣ ಸಚಿವೆ ಗಿಲಿಯನ್ ಕೀಗನ್ Photo: twitter/GillianKeegan

ಲಂಡನ್: ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿರುವ ಬಗ್ಗೆ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗೆ ಉತ್ತರಿಸುವಾಗ ಅಸಭ್ಯ ಪದ ಬಳಕೆ ಮಾಡಿ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದ ಬ್ರಿಟನ್‍ನ ಶಿಕ್ಷಣ ಸಚಿವೆ ಗಿಲಿಯನ್ ಕೀಗನ್ ತಮ್ಮ ಹೇಳಿಕೆಗೆ ಮಂಗಳವಾರ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.

ಶಾಲೆಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಲು ಹಾಗೂ ಶೈಕ್ಷಣಿಕ ಮಟ್ಟ ಸುಧಾರಣೆಗೆ ಸಾಕಷ್ಟು ಕಾರ್ಯ ಮಾಡಿದ್ದರೂ ತನ್ನ ಕೆಲಸಕ್ಕೆ ಯಾರೂ ಧನ್ಯವಾದವನ್ನೂ ಹೇಳುತ್ತಿಲ್ಲ. ಇತರರು ತಮ್ಮ ... ಮೇಲೆ ಕುಳಿತುಕೊಂಡು ಕಾಲಹರಣ ಮಾಡಿರುವುದನ್ನೂ ಯಾರೂ ಗಮನಿಸಿಲ್ಲ..' ಎಂದಿದ್ದರು. ಈ ಹೇಳಿಕೆ ಪ್ರಸಾರವಾದ ಬಳಿಕ ಸಚಿವೆಯನ್ನು ವಜಾಗೊಳಿಸಬೇಕೆಂದು ಪ್ರಧಾನಿ ರಿಷಿ ಸುನಕ್ ಮೇಲೆ ಒತ್ತಡ ಹೆಚ್ಚಿತ್ತು. ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತ ಸಚಿವೆ ಕೀಗನ್ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News