ವಿಯೆಟ್ನಾಮ್ | 12 ಸಾವಿರ ವರ್ಷ ಹಳೆಯ ಅಸ್ಥಿಪಂಜರ ಪತ್ತೆ
PC : X \ @NHM_London
ಹನೋಯ್, ಆ.31: ಉತ್ತರ ವಿಯೆಟ್ನಾಂನಲ್ಲಿ ಆರಂಭಿಕ ಹಿಮಯುಗದ, 12 ಸಾವಿರ ವರ್ಷ ಪುರಾತನವಾದ ಮಾನವ ಅಸ್ಥಿಪಂಜರವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಈ ಅಸ್ಥಿಪಂಜರವು 35 ವರ್ಷ ವಯಸ್ಸಿನ ವ್ಯಕ್ತಿಯದ್ದೆನ್ನಲಾಗಿದೆ. ಆತನನ್ನು ಎಸೆತದ ಸಾಮಾಗ್ರಿಯ ಮೂಲಕ ಸ್ಪಟಿಕ ಶಿಲೆಯನ್ನು ಬಳಸಿ ಕೊಂದಿರುವ ಸಾಧ್ಯತೆಯ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಹರಿತವಾದ ಸ್ಪಟಿಕ ಶಿಲೆಯು ವ್ಯಕ್ತಿಯ ಕತ್ತನ್ನು ಸೀಳಿದ್ದು, ಆತನ ಗಂಟಲುನಾಳದ ಎಲುಬನ್ನು ಘಾಸಿಗೊಳಿಸಿತ್ತು.
ಈ ಅಸ್ಥಿಪಂಜರದ ಪತ್ತೆಯಿಂದಾಗಿ, ಹಿಮಯುಗ ಕಾಲದ ಜೀವನ ಹಾಗೂ ಬೇಟೆಗಾರರ ಗುಪುಗಳ ನಡುವಿನ ಸಂಘರ್ಷದ ಬಗ್ಗೆ ಅಪೂರ್ವವಾದ ಬೆಳಕನ್ನು ಚೆಲ್ಲುತ್ತದೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೆ ಗಾಯಗೊಂಡ ಬಳಿಕ ಆತನ ಶುಶ್ರೂಷೆ ನಡೆದಿರುವುದು, ಆ ಕಾಲದಲ್ಲಿಯೂ ಸಮುದಾಯಿಕ ಜೀವನ ಪದ್ಧತಿ ಅಸ್ತಿತ್ವದಲ್ಲಿರುವುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಯುನೆಸ್ಕೊದ ವಿಶ್ವಪಾರಂಪರಿಕ ತಾಣ ಟ್ರಾಂಗ್ ಆ್ಯನ್ ಭೂಪ್ರದೇಶದ ಸಮುಚ್ಚಯದಲ್ಲಿರುವ ಗುಹೆಯೊಂದರಲ್ಲಿ ಈ ಆಸ್ಥಿಪಂಜರ ಪತ್ತೆಯಾಗಿದೆ.