ಲಾಹೋರ್ ನಲ್ಲಿ ಭುಗಿಲೆದ್ದ ಘರ್ಷಣೆ: ಟಿಎಲ್ಪಿಯ 11 ಕಾರ್ಯಕರ್ತರು ಮೃತ್ಯು
Update: 2025-10-11 22:57 IST
Photo : Videograb
ಲಾಹೋರ್, ಅ.11: ಪಾಕಿಸ್ತಾನದ ತೆಹ್ರೀಕೆ ಲಬ್ಬಾಯ್ಕ್ ಪಾಕಿಸ್ತಾನ್(ಟಿಎಲ್ಪಿ) ಪಕ್ಷ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯ ಸಂದರ್ಭ ಹಿಂಸಾಚಾರ ಮತ್ತು ಘರ್ಷಣೆ ಭುಗಿಲೆದ್ದಿದ್ದು ಪಕ್ಷದ 11 ಕಾರ್ಯಕರ್ತರು ಪೊಲೀಸರ ಗುಂಡೇಟಿಗೆ ಬಲಿಯಾಗಿರುವುದಾಗಿ ಟಿಎಲ್ಪಿ ಮುಖ್ಯಸ್ಥ ಸಾದ್ ರಿಝ್ವಿ ಹೇಳಿದ್ದಾರೆ.
25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಗಾಯಾಳುಗಳಿಗೆ ವೈದ್ಯಕೀಯ ನೆರವು ಒದಗಿಸಲೂ ಅಧಿಕಾರಿಗಳು ಅವಕಾಶ ನೀಡಿಲ್ಲ ಎಂದವರು ಆರೋಪಿಸಿದ್ದಾರೆ. ಹಿಂಸಾಚಾರದಲ್ಲಿ 15ಕ್ಕೂ ಅಧಿಕ ಪೊಲೀಸರು ಗಾಯಗೊಂಡಿರುವುದಾಗಿ ವರದಿಯಾಗಿದೆ.