PAK, IRAN ಸೇರಿದಂತೆ 75 ದೇಶಗಳಿಗೆ ವಲಸೆ ವೀಸಾ ಪ್ರಕ್ರಿಯೆ ಸ್ಥಗಿತ: ಅಮೆರಿಕ ಸೂಚನೆ
Update: 2026-01-15 21:47 IST
ಸಾಂದರ್ಭಿಕ ಚಿತ್ರ | Photo Credit : freepik
ವಾಷಿಂಗ್ಟನ್, ಜ.15: ಸಾರ್ವಜನಿಕ ಕಲ್ಯಾಣ ಪ್ರಯೋಜನಗಳ ಮೇಲೆ ಅವಲಂಬಿತವಾಗಿರುವ ಜನರಿಗೆ ಪ್ರವೇಶವನ್ನು ನಿರ್ಬಂಧಿಸುವ ನವೀಕೃತ ಪ್ರಯತ್ನದ ಭಾಗವಾಗಿ ಅಮೆರಿಕಾದ ವಿದೇಶಾಂಗ ಇಲಾಖೆಯು 75 ದೇಶಗಳ ಅರ್ಜಿದಾರರಿಗೆ ವಲಸೆ ವೀಸಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಸೂಚಿಸಿದೆ.
ಕಾನ್ಸುಲರ್ ಕಚೇರಿಗಳಿಗೆ ರವಾನಿಸಿರುವ ಮೆಮೋ ಪ್ರಕಾರ, ಇಲಾಖೆ ತನ್ನ ಸ್ಕ್ರೀನಿಂಗ್ ಮತ್ತು ಪುನರ್‌ಪರಿಶೀಲನಾ ಕಾರ್ಯವಿಧಾನಗಳನ್ನು ಮರುಮೌಲ್ಯಮಾಪನ ಮಾಡುವ ಅವಧಿಯಲ್ಲಿ, ಅಸ್ತಿತ್ವದಲ್ಲಿರುವ ವಲಸೆ ಕಾನೂನುಗಳ ಅಡಿಯಲ್ಲಿ ವೀಸಾಗಳನ್ನು ನಿರಾಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕ್ರಮ ಜನವರಿ 21ರಿಂದ ಜಾರಿಗೆ ಬರಲಿದ್ದು, ಅನಿರ್ದಿಷ್ಟಾವಧಿಗೆ ಜಾರಿಯಲ್ಲಿರುತ್ತದೆ.
ಪಾಕಿಸ್ತಾನ, ರಷ್ಯಾ, ಇರಾನ್, ಸೊಮಾಲಿಯಾ, ಅಫ್ಘಾನಿಸ್ತಾನ, ಬ್ರೆಜಿಲ್, ಇರಾಕ್, ಈಜಿಪ್ಟ್ ಸೇರಿದಂತೆ ಹಲವು ದೇಶಗಳು ಈ ಪಟ್ಟಿಯಲ್ಲಿ ಸೇರಿವೆ.