×
Ad

ಟ್ರಂಪ್ ಜತೆ ವಿಸ್ತೃತ ಮಾತುಕತೆಯ ನಿರೀಕ್ಷೆ: ವೊಲೊದಿಮಿರ್ ಝೆಲೆನ್‍ಸ್ಕಿ

Update: 2025-02-03 22:07 IST

ವೊಲೊದಿಮಿರ್ ಝೆಲೆನ್‍ಸ್ಕಿ | Image Credit source: PTI

ಕೀವ್: ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಅಮೆರಿಕ ಮತ್ತು ರಶ್ಯದ ನಡುವೆ ನಡೆಯುವ ಮಾತುಕತೆಯಿಂದ ತಮ್ಮ ದೇಶವನ್ನು ಹೊರಗಿರಿಸುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಹೇಳಿದ್ದು ಕದನ ವಿರಾಮ ಯೋಜನೆ ರೂಪಿಸಲು ಉಕ್ರೇನ್ ಮತ್ತು ಅಮೆರಿಕದ ನಡುವೆ ಇನ್ನಷ್ಟು ಮಾತುಕತೆಯನ್ನು ಎದುರು ನೋಡುವುದಾಗಿ ಹೇಳಿದ್ದಾರೆ.

ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿ ರಶ್ಯವು ಯಾವುದೇ ಹೊಂದಾಣಿಕೆಗೆ ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ಆದ್ದರಿಂದ ರಶ್ಯದ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸುವ ಬೆದರಿಕೆ ಒಡ್ಡುವ ಮೂಲಕ ಟ್ರಂಪ್ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೇಲೆ ಒತ್ತಡ ಹಾಕಬಹುದು ಎಂದು ಝೆಲೆನ್ಸ್ಕಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News