×
Ad

ಗ್ರೀನ್‍ಲ್ಯಾಂಡ್ ಸ್ವಾಧೀನದ ಬಗ್ಗೆ ಟ್ರಂಪ್ ಚರ್ಚೆ: ಮಿಲಿಟರಿ ಆಯ್ಕೆಗೆ ಪ್ರಾಧಾನ್ಯತೆ; ಶ್ವೇತಭವನ

Update: 2026-01-07 22:32 IST

ಡೊನಾಲ್ಡ್ ಟ್ರಂಪ್ | Photo Credit : AP \PTI

ವಾಷಿಂಗ್ಟನ್, ಜ.7: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ತಂಡವು ಗ್ರೀನ್‍ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಆಯ್ಕೆಗಳನ್ನು ಚರ್ಚಿಸುತ್ತಿದೆ ಮತ್ತು ಗುರಿ ಸಾಧನೆಯಲ್ಲಿ ಮಿಲಿಟರಿ ಬಳಕೆಯು ಯಾವಾಗಲೂ ಒಂದು ಆಯ್ಕೆಯಾಗಿದೆ ಎಂದು ಶ್ವೇತಭವನ ಹೇಳಿದೆ.

ಆಕ್ರ್ಟಿಕ್‍ನಲ್ಲಿ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಗ್ರೀನ್‍ಲ್ಯಾಂಡ್‍ನಲ್ಲಿ ರಶ್ಯ ಮತ್ತು ಚೀನಾಗಳ ಪ್ರಭಾವ ಹೆಚ್ಚುತ್ತಿದೆ ಎಂದು ಕಳವಳಗೊಂಡಿರುವ ಟ್ರಂಪ್, ಈ ಪ್ರದೇಶವನ್ನು ಅಮೆರಿಕಾದ ನಿಯಂತ್ರಣಕ್ಕೆ ಪಡೆಯುವ ನಿರ್ಧಾರವನ್ನು ಘೋಷಿಸಿದ್ದರು. ಆದರೆ ಅಮೆರಿಕಾದ ಭಾಗವಾಗಲು ಇಚ್ಚಿಸುವುದಿಲ್ಲ ಎಂದು ಗ್ರೀನ್‍ಲ್ಯಾಂಡ್ ಪದೇ ಪದೇ ಹೇಳಿದೆ.

ಆಕ್ರ್ಟಿಕ್ ಪ್ರದೇಶದಲ್ಲಿ ನಮ್ಮ ವಿರೋಧಿಗಳನ್ನು ತಡೆಯಲು ಅಗತ್ಯವಿರುವ ರಾಷ್ಟ್ರೀಯ ಭದ್ರತೆಯ ಆದ್ಯತೆಯಾಗಿ ಗ್ರೀನ್‍ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಟ್ರಂಪ್ ಬಯಸಿದ್ದಾರೆ. ಈ ಪ್ರಮುಖ ವಿದೇಶಾಂಗ ನೀತಿ ಗುರಿಯನ್ನು ಅನುಸರಿಸಲು ಹಲವಾರು ಆಯ್ಕೆಗಳನ್ನು ಚರ್ಚಿಸಲಾಗುತ್ತಿದೆ. ಗ್ರೀನ್‍ಲ್ಯಾಂಡ್‍ಗೆ ಬೆಂಬಲ ಸೂಚಿಸುವ ನೇಟೊ ನಾಯಕರ ಹೇಳಿಕೆಗಳು ಟ್ರಂಪ್‍ರನ್ನು ತಡೆಯುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News