×
Ad

ಯೆಮನ್ | ವಿಶ್ವಸಂಸ್ಥೆಯ ಐವರು ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿದ ಹೌದಿ ಬಂಡುಕೋರರು

Update: 2025-10-21 22:25 IST

ಸಾಂದರ್ಭಿಕ ಚಿತ್ರ

ಸನಾ, ಅ.21: ಯೆಮನ್ ರಾಜಧಾನಿ ಸನಾದನಲ್ಲಿನ ವಿಶ್ವಸಂಸ್ಥೆ ಕಚೇರಿಯ ಐವರು ಸಿಬ್ಬಂದಿಗಳನ್ನು ಹೌದಿ ಬಂಡುಕೋರರು ಬಿಡುಗಡೆಗೊಳಿಸಿದ್ದು ಉಳಿದ 15 ಸಿಬ್ಬಂದಿಗಳಿಗೆ ವಿಶ್ವಸಂಸ್ಥೆ ಕಚೇರಿಯ ಆವರಣದೊಳಗೆ ಮುಕ್ತವಾಗಿ ಚಲಿಸಲು ಅವಕಾಶ ನೀಡಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜಾರಿಕ್ ಹೇಳಿದ್ದಾರೆ.

ಸನಾದಲ್ಲಿ ರವಿವಾರ ವಿಶ್ವಸಂಸ್ಥೆಯ ಸೌಲಭ್ಯದ ಮೇಲೆ ದಾಳಿ ನಡೆಸಿದ ಇರಾನ್ ಬೆಂಬಲಿತ ಹೌದಿ ಸಶಸ್ತ್ರ ಹೋರಾಟಗಾರರು 20 ಸಿಬ್ಬಂದಿಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿತ್ತು. ಸಿಬ್ಬಂದಿಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸೋಮವಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಇರಾನ್, ಯೆಮನ್ ಮತ್ತು ಸೌದಿ ಅರೆಬಿಯಾದ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಆ ಬಳಿಕ ಹೌದಿಗಳು ಐವರು ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಡ್ಯುಜಾರಿಕ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News