Photo Credit : Screenshot/X/@spokespersonyem

ಏಡನ್, ಅ. 31: ಶುಕ್ರವಾರದಿಂದ ಹೂತಿ ನೆಲೆಗಳ ಮೇಲೆ 1,119 ದಾಳಿಗಳನ್ನು ನಡೆಸಿದ್ದು, 427 ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಹಾಗೂ 142 ಮಿಲಿಟರಿ ವಾಹನಗಳು ಮತ್ತು ಇತರ ಯುದ್ಧೋಪಕರಣಗಳನ್ನು ನಾಶಪಡಿಸಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ ಎಂದು ಯಮನ್ ಸಶಸ್ತ್ರ ಪಡೆಗಳು ಶನಿವಾರ ಪ್ರತಿಪಾದಿಸಿವೆ.

ಈ ಕಾರ್ಯಾಚರಣೆಗಳಲ್ಲಿ ಯುದ್ಧ ವಿಮಾನಗಳು, ಡ್ರೋನ್ಗಳು, ಫೀಲ್ಡ್ ಆರ್ಟಿಲರಿ ಮತ್ತು ರಾಕೆಟ್ ಲಾಂಚರ್ಗಳನ್ನು ಬಳಸಲಾಗಿದೆ. ದಾಳಿಗಳು ಹೂತಿ ನಾಯಕರು ಮತ್ತು ಅವರ ಸಭೆಗಳು, ಸೇನಾ ಚಲನವಲನಗಳು ಮತ್ತು ಹೆಚ್ಚುವರಿ ಪಡೆಗಳು, ಯುದ್ಧ ನೆಲೆಗಳ ಸ್ಥಾನಗಳು, ಗುಂಡಿನ ದಾಳಿ ನಡೆಸುವ ಕೇಂದ್ರಗಳು ಹಾಗೂ ಸರಬರಾಜು ಮಾರ್ಗಗಳನ್ನು ಗುರಿಯಾಗಿಸಿಕೊಂಡಿದ್ದವು ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ನೆಲಮಟ್ಟದ ಸೇನಾ ಕಾರ್ಯಾಚರಣೆಯೊಂದಿಗೆ ನಡೆಸಲಾದ ಈ ದಾಳಿಗಳು ಹೂತಿ ಪಡೆಗಳಿಗೆ ಭಾರಿ ನಷ್ಟವನ್ನು ಉಂಟುಮಾಡಿದ್ದು, ಅಲ್-ಜೌಫ್ ಪ್ರಾಂತದ ಹಲವಾರು ಆಯಕಟ್ಟಿನ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಮತ್ತು ಮುನ್ನುಗ್ಗಲು ಸರ್ಕಾರಿ ಪಡೆಗಳಿಗೆ ನೆರವಾಗಿವೆ. ತೈಜ್ನಲ್ಲಿ ಸರಕಾರಿ ಪಡೆಗಳು ಮತ್ತು ಮಿತ್ರರಾಷ್ಟ್ರಗಳ ಹೋರಾಟಗಾರರು ಹೂತಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದು, ವಾಯುದಾಳಿ ಮತ್ತು ಫಿರಂಗಿ ತುಕಡಿಯ ಬೆಂಬಲದೊಂದಿಗೆ ಅವರ ಚಲನವಲನಗಳು ಹಾಗೂ ಹೆಚ್ಚುವರಿ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor