×
Ad

ಕೆ.ಎಲ್. ರಾಹುಲ್ ಲಕ್ನೊ ಸೂಪರ್ ಜಯಂಟ್ಸ್ ಕುಟುಂಬದ ಅವಿಭಾಜ್ಯ ಅಂಗ: ಸಂಜಯ್ ಗೊಯೆಂಕಾ

Update: 2024-08-28 21:24 IST

 ಸಂಜಯ್ ಗೊಯೆಂಕಾ , ಕೆ.ಎಲ್. ರಾಹುಲ್ | PC : X 

ಹೊಸದಿಲ್ಲಿ: ಕೆ.ಎಲ್. ರಾಹುಲ್ ಅವರು ಲಕ್ನೊ ಸೂಪರ್ ಜಯಂಟ್ಸ್ ಕುಟುಂಬದ ಅವಿಭಾಜ್ಯ ಹಾಗೂ ಪ್ರಮುಖ ಭಾಗವಾಗಿದ್ದಾರೆ. ತಂಡದ ಸೇರಿದ ನಂತರ ಅವರು ಪ್ರಮುಖ ಪಾತ್ರನಿರ್ವಹಿಸಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ಲಕ್ನೊದ ಮಾಲಕ ಸಂಜೀವ್ ಗೊಯೆಂಕಾ ಬುಧವಾರ ಹೇಳಿದ್ದಾರೆ.

ಲಕ್ನೊ ತಂಡದಲ್ಲಿ ರಾಹುಲ್ ಭವಿಷ್ಯದ ಕುರಿತು ಊಹಾಪೋಹ ಹಬ್ಬಿರುವಾಗಲೇ ಗೊಯೆಂಕಾ ಈ ಹೇಳಿಕೆ ನೀಡಿದ್ದಾರೆ.

ಮುಂಬರುವ ಐಪಿಎಲ್ ಋತುವಿನಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಹಾಗೂ ನಾಯಕತ್ವದ ಕುರಿತಂತೆ ಗೊಯೆಂಕಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ರಾಹುಲ್ ಅವರು ಇತ್ತೀಚೆಗೆ ಕೋಲ್ಕತಾದಲ್ಲಿ ತಂಡದ ಮಾಲಕರನ್ನು ಭೇಟಿಯಾಗಿದ್ದರು.

ನಾನು ಕಳೆದ 3 ವರ್ಷಗಳಿಂದ ರಾಹುಲ್‌ರೊಂದಿಗೆ ನಿರಂತರವಾಗಿ ಸಭೆ ನಡೆಸುತ್ತಾ ಬಂದಿದ್ದೇನೆ. ಕೋಲ್ಕತಾದಲ್ಲಿನ ಭೇಟಿಯು ಇಷ್ಟೊಂದು ಗಮನ ಸೆಳೆದಿರುವುದು ನನಗೆ ಅಚ್ಚರಿ ತಂದಿದೆ. ರಿಟೆನ್ಶನ್ ನಿಯಮಗಳು ಹೊರಬರುವ ತನಕ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಝಹೀರ್ ಖಾನ್‌ರನ್ನು ತನ್ನ ತಂಡದ ಸಲಹೆಗಾರನಾಗಿ ನೇಮಿಸಿದ ನಂತರ ಗೊಯೆಂಕಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News