×
Ad

ಕಲಬುರಗಿ | ಭೀಕರ ರಸ್ತೆ ಅಪಘಾತ: ಇಬ್ಬರು ಯುವತಿಯರು ಸ್ಥಳದಲ್ಲೇ ಮೃತ್ಯು

Update: 2023-12-15 14:34 IST

ಕಲಬುರಗಿ, ಡಿ.15: ಕೆಎಸ್ಸಾರ್ಟಿಸಿ ಬಸ್ ಮತ್ತು ಆಟೊ ರಿಕ್ಷಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವತಿಯರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಇಟಗಾ ಗ್ರಾಮದ ತಿಪ್ಪಣ್ಣ ಇಜೇರಿ ಎಂಬವರ ಪತ್ನಿ ಚಂದ್ರಕಲಾ(30) ಮತ್ತು ರಾಜೇದ್ರ ಇಜೇರಿ ಎಂಬವರ ಪುತ್ರಿ ದೇವಕಿ(20) ಮೃತಪಟ್ಟವರು. ಆಟೊ ರಿಕ್ಷಾ ಚಾಲಕ ಖಣದಾಳ ನಿವಾಸಿ ಪ್ರಹ್ಲಾದ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಹೊರವಲಯದ ಕೇಂದ್ರ ಕಾರಾಗೃಹದ ಸಮೀಪ ಈ ಅಪಘಾತ ಸಂಭವಿಸಿದೆ. ಆಟೊ ರಿಕ್ಷಾಕ್ಕೆ ರಾಯಚೂರು ಕಡೆಯಿಂದ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಕಲಬುರಗಿ ಸಂಚಾರ ಠಾಣೆ ಪೊಲೀಸರು ಧಾವಿಸಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News