ದೇಶದ ಸ್ವಾಭಿಮಾನಕ್ಕಿಂತ ಪ್ರಧಾನಿ ಮೋದಿಗೆ ಕ್ರಿಕೆಟ್ ಹೆಚ್ಚಾಯ್ತೇ?: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
ಕಲಬುರಗಿ: ಪಾಕಿಸ್ತಾನ ಬೆಂಬಲಿತ ಉಗ್ರರು ಭಾರತದೊಳಗೆ ಪ್ರವೇಶಿಸಿ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿನ ಪ್ರವಾಸಿಗರನ್ನು ಹಾಗೂ ಸೈನಿಕರನ್ನು ಕೊಲೆ ಮಾಡಿದರು. ಇಷ್ಟಾದರೂ ದೇಶದ ಸ್ವಾಭಿಮಾನಕ್ಕಿಂತ ಪ್ರಧಾನಿ ಮೋದಿಯವವರಿಗೆ ಕ್ರಿಕೆಟ್ ಹೆಚ್ಚಾಯ್ತೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಐವಾನ್ ಎ ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ- ಪಾಕಿಸ್ತಾನ ತಂಡಗಳು ಕ್ರಿಕೆಟ್ ಆಡಿವೆ, ಬಿಜೆಪಿಗರಿಗೆ ನಾಚಿಕೆಯಾಗಬೇಕು. ಭಾರತ ಆಡದಿದ್ದರೆ ಅಂಕ ಹೋಗುತ್ತವೆ ಎನ್ನುವುದು ಬಿಜೆಪಿಗೆ ಸಮಜಾಯಿಷಿ ಹೇಳಿಕೆ ನೀಡುತ್ತಾರೆ. ಹೋದರೆ ಹೋಗಲಿ ಬಿಡಿ ಅಂಕ ಮುಖ್ಯವೇ? ಸರಕಾರ ಬಿಸಿಸಿಐಗೆ ಯಾಕೆ ಸ್ಪಷ್ಟ ನಿರ್ದೇಶನ ನೀಡಿಲ್ಲ?. ಪ್ರಧಾನಿ ಮೋದಿ ಯಾಕೆ ಗೃಹ ಸಚಿವರಿಗೆ ಮತ್ತು ಅವರ ಮಗ ಜಯ್ ಶಾಗೆ ಹೇಳಿಲ್ಲ? ಹುತಾತ್ಮರ ಮನೆಯವರೂ ಭಾರತ ಪಾಕ್ ಜೊತೆ ಕ್ರಿಕೆಟ್ ಆಡುವುದು ಬೇಡ ಅಂದಿದ್ದಾರೆ, ಇಷ್ಟೊಂದು ವಿರೋಧದ ನಡುವೆಯೂ ಭಾರತ ಯಾಕೆ ಆಡಿತು ಎಂದು ವಾಗ್ದಾಳಿ ನಡೆಸಿದ್ದಾರೆ.
ಧರ್ಮಸ್ಥಳ, ಮದ್ದೂರು, ಚಾಮುಂಡೇಶ್ವರಿ ಚಲೋ, ಬಿಜೆಪಿಯವರಿಗೆ ಬೇಕಾಗಿರುವುದಾದರೂ ಏನು? ಕಾಮನ್ ಸೆನ್ಸ್ ಇದೆಯಾ? ಧರ್ಮಸ್ಥಳ, ಮದ್ದೂರು ಚಲೋ ಆಯ್ತು. ತಲೆ ಕಡಿರಿ ಅಂತ ಪ್ರಚೋದನೆ ಹೇಳಿಕೆ ನೀಡುವುದು ಬಿಜೆಪಿ ನಾಯಕರ ಚಾಳಿಯಾಗಿದೆ. ಸಿಟಿ ರವಿ ಸೇರಿದಂತೆ ಯಾವ ಬಿಜೆಪಿನಾಯಕರು ತಮ್ಮ ಮಕ್ಕಳ ಕೈಗೆ ಮಚ್ಚು ಲಾಂಗು ಕೊಟ್ಟಿದಾರೆ? ಬಿಜೆಪಿಗರು ರಾಜ್ಯವನ್ನು ಯುಪಿ, ಬಿಹಾರ ಮಾಡಲು ಹೊರಟಿದ್ದಾರ? ಎಂದು ಟೀಕಿಸಿದರು
ಬಿಜೆಪಿ ಪರ ವಾದಿಸುವ ಬಾಡಿಗೆ ಬಾಷಣಕಾರರು ಸೇರಿದಂತೆ ಪ್ರತಾಪ ಸಿಂಹ, ಸಿ.ಟಿ.ರವಿ ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆಗೆ ಕಳಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.
ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆಯಾಗಿಲ್ಲ:
ರಾಜ್ಯ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆಕಾಂಕ್ಷಿಗಳು ಇದ್ದಾರೆ. ನಮ್ಮಲ್ಲಿ ಕೆಲವರು ಸಿಎಂ, ಎಐಸಿಸಿ ಅಧ್ಯಕ್ಷರಿಗೆ ಇನ್ನೂ ಕೆಲವರು ಡಿಸಿಎಂ ವರೆಗೆ ಮಾತನಾಡಿರುತ್ತಾರೆ. ಅವರು ಏನು ಮಾತನಾಡಿರುತ್ತಾರೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ಪುನರ್ ರಚನೆ ಸಿಎಂ, ಎಐಸಿಸಿ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ಹೇಳಿದರು.