ಚಿಂಚೋಳಿಯಲ್ಲಿ ಭಾರೀ ಮಳೆ: ಮುಲ್ಲಾ ಮಾರಿ ಜಲಾಶಯದಿಂದ 1200 ಕ್ಯೂಸೆಕ್ ನೀರು ಹೊರಕ್ಕೆ
ಕಲಬುರಗಿ: ಚಿಂಚೋಳಿ ತಾಲೂಕಿನಲ್ಲಿ ಸುರಿಯುತ್ತಿರುವ ಅಬ್ಬರದ ಮಳೆಯಿಂದ ಕೆಳದಂಡೆ ಮುಲ್ಲಾ ಮಾರಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಜೋರಾದ ಮಳೆ ಬೀಳುತ್ತಿದ್ದರಿಂದ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗುತ್ತಿದ್ದು ಜಲಾಶಯ ಸುರಕ್ಷತೆ ಕಾಪಾಡುವುದಕ್ಕಾಗಿ ಎರಡು ಗೇಟಿನಿಂದ ನದಿಗೆ ನೀರು ಹರಿ ಬಿಡಲಾಗುತ್ತಿದೆ ಎಂದು ಯೋಜನೆಯ ಸಹಾಯಕ ಎಂಜಿನಿಯರ್ ವಿನಾಯಕ ಚೌಹಾಣ್ ತಿಳಿಸಿದ್ದಾರೆ.
ಕೆಳದಂಡೆ ಮುಲ್ಲಾ ಮಾರಿ ಯೋಜನೆಯ ಜಲಾಶಯದಲ್ಲಿ ಒಳಹರಿವು 280 ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಗುರುವಾರ 2 ಗೇಟನ್ನು ತಲಾ ಒಂದು ಅಡಿ ಮೇಲೆತ್ತಿ 1200 ಕ್ಯೂಸೆಕ್ ನೀರು ನದಿಗೆ ಹರಿದು ಬಿಡಲಾಗುತ್ತಿದೆ.
ಮುಲ್ಲಾ ಮಾರಿ ನದಿ ಪಾತ್ರದ ಚಿಮ್ಮನಚೋಡ, ತಾಜಲಾಪುರ,ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಪೋಲಕಪಳ್ಳಿ, ಅಣವಾರ, ಗರಗಪಳ್ಳಿ, ಇರಗಪಳ್ಳಿ, ಭಕ್ತಂಪಳ್ಳಿ, ಕರ್ಚಖೇಡ, ಜಟ್ಟೂರ ಗ್ರಾಮದ ಜನರು ಎಚ್ಚರಿಕೆಯಿಂದ ಇರಬೇಕು.
ನೀರು ಬಹಳ ರಭಸದಿಂದ ಹರಿಯುವುದರಿಂದ ಯಾರು ನದಿ ಕಡೆಗೆ ದನಕರುಗಳಿಗೆ ನೀರು ಕುಡಿಸಲು ಮತ್ತು ಮಹಿಳೆಯರು ಬಟ್ಟೆಗಳನ್ನು ತೊಳೆಯಲು ಹೋಗಬಾರದು.ಯಾರು ನದಿಗೆ ಈಜಲು ಹೋಗಬಾರದು ಎಂದು ಯೋಜನೆಯ ಎ.ಇ.ವಿನಾಯಕ ಚವ್ಹಾಣ ಮಾಡಿಕೊಂಡಿದ್ದಾರೆ.