×
Ad

ಕಲಬುರಗಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ 25ನೇ ರಾಜ್ಯ ಸಮ್ಮೇಳನ

Update: 2025-08-31 16:05 IST

ಕಲಬುರಗಿ: ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಸಭಾಂಗಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ 25ನೇ ರಾಜ್ಯ ಸಮ್ಮೇಳನವು ಶನಿವಾರ ನಡೆಯಿತು.

ಈ ವೇಳೆ ಮಾತನಾಡಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಂಜಾನ್ ದರ್ಗಾ ಅವರು, 'ಶರಣಬಸವೇಶ್ವರರು ಮತ್ತು ಖ್ವಾಜಾ ಬಂದೇ ನವಾಝ್‌ ಅವರು ಕಲಬುರಗಿಯ ಸೌಹಾರ್ದ ಪರಂಪರೆಯ ಎರಡು ಕಣ್ಣುಗಳಂತೆ ಇದ್ದಾರೆ. ಇಂತಹ ಭಾವೈಕ್ಯದ ನೆಲದಲ್ಲಿ ಸಿಪಿಐ ಪಕ್ಷದ ಸಮ್ಮೇಳನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ಮಾತನಾಡಿದರು.

ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯಸಭಾ ಮಾಜಿ ಸದಸ್ಯ ಅಜೀಜ್ ಪಾಷಾ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮಾರುತಿ ಗೋಖಲೆ, ಹಿರಿಯ ವಕೀಲ ಪಿ.ವಿಲಾಸಕುಮಾರ್, ಪಕ್ಷದ ಮುಖಂಡರಾದ ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಪ್ರಭುದೇವ ಯಳಸಂಗಿ, ಹಣಮಂತರಾಯ ಅಟ್ಟೂರ, ಪದ್ಮಾವತಿ ಮಾಲಿಪಾಟೀಲ ಸೇರಿದಂತೆ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News