ದಸರಾ-ದೀಪಾವಳಿ ಹಬ್ಬದ ಪ್ರಯುಕ್ತ ಕೊಲ್ಲಾಪುರ-ಕಲಬುರಗಿ ವಿಶೇಷ ರೈಲು ಹೆಚ್ಚುವರಿಯಾಗಿ ನಿಲುಗಡೆ
ಸಾಂದರ್ಭಿಕ ಚಿತ್ರ
ಕಲಬುರಗಿ: ದಸರಾ-ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಬೇಡಿಕೆ ಹಾಗೂ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 14ರಿಂದ ನವೆಂಬರ್ 15ರವರೆಗೆ ಕೊಲ್ಲಾಪುರ–ಕಲಬುರಗಿ ನಡುವೆ ದಸರಾ-ದೀಪಾವಳಿ ವಿಶೇಷ ರೈಲುಗಳನ್ನು ಒಟ್ಟು 48 ಟ್ರಿಪ್ಗಳಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮಧ್ಯ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಕಟಣೆ ತಿಳಿಸಿದೆ.
ಕೊಲ್ಲಾಪುರ–ಕಲಬುರಗಿ ವಿಶೇಷ ರೈಲು (ರೈಲು ಸಂಖ್ಯೆ 01451) 24 ಟ್ರಿಪ್ಗಳು ಹಾಗೂ ಕಲಬುರಗಿ–ಕೊಲ್ಲಾಪುರ ವಿಶೇಷ ರೈಲು (ರೈಲು ಸಂಖ್ಯೆ 01452) 24 ಟ್ರಿಪ್ಗಳನ್ನು ನಡೆಸಲಿದೆ. ಈ ರೈಲುಗಳು ಮಂಗಳವಾರ ಮತ್ತು ಶುಕ್ರವಾರ ಹೊರತುಪಡಿಸಿ ವಾರದಲ್ಲಿ ಐದು ದಿನ ಸಂಚರಿಸಲಿವೆ.
ವಿಶೇಷ ರೈಲುಗಳು ಮಾಧಾ, ಮೋಹೋಲ್, ಅಕ್ಕಲಕೋಟೆ ರಸ್ತೆ, ದುಧನಿ ಮತ್ತು ಗಂಗಾಪುರ ರಸ್ತೆ ಮಾರ್ಗವಾಗಿ ಸಂಚರಿಸಲಿವೆ. ವಿಶೇಷ ರೈಲು ಸೇವೆಗಳಲ್ಲಿ ಇತರೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.