Kalaburagi | ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಮಾನದಂಡ ದಿನ ಆಚರಣೆ
ಕಲಬುರಗಿ: ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಇಂಡಿಯಾ), ಕಲಬುರಗಿ ಸ್ಥಳೀಯ ಕೇಂದ್ರ ಹಾಗೂ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ವಿಶ್ವ ಮಾನದಂಡ ದಿನ–2026 ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ “ಕಾರ್ಯನಿರ್ವಹಣಾ ಮಾನದಂಡಗಳು ಮತ್ತು ಅಳತೆಗಳು” ವಿಷಯದ ಕುರಿತು ಮಾತನಾಡಿದ ಕಾನೂನು ಮಾಪನಶಾಸ್ತ್ರ ಇಲಾಖೆಯ ಉಪ ನಿಯಂತ್ರಕ ರಫೀಕ್ ಲಡಾಜಿ, ನಿಖರ ಅಳತೆಗಳು ಹಾಗೂ ನ್ಯಾಯಸಮ್ಮತ ವ್ಯಾಪಾರದಲ್ಲಿ ಮಾನದಂಡಗಳ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಇಲಾಖೆಯ ನಿರೀಕ್ಷಕರು ವಿವಿಧ ಮಾನದಂಡಗಳ ಪ್ರಾಯೋಗಿಕ ಬಳಕೆಯನ್ನು ಪ್ರದರ್ಶಿಸಿದರು.
ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದರಾಮ ಆರ್. ಪಾಟೀಲ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಮಾನದಂಡಗಳ ಕುರಿತು ಅಗತ್ಯ ಜ್ಞಾನ ಹೊಂದಿರಬೇಕು ಎಂದು ಹೇಳಿದರು.
ಐಇಐ ಕಲಬುರಗಿ ಸ್ಥಳೀಯ ಕೇಂದ್ರದ ಅಧ್ಯಕ್ಷ ಎರ್. ಕಕ್ಕೇರಿ ಚಂದ್ರಶೇಖರ ಅವರು ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಎಂಜಿನಿಯರ್ಗಳಲ್ಲಿ ಪ್ರಾಯೋಗಿಕ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಕೈಗೊಳ್ಳುತ್ತಿರುವ ಪ್ರಯತ್ನಗಳನ್ನು ವಿವರಿಸಿದರು.
ಕಾರ್ಯಕ್ರಮದ ಸಂಯೋಜಕ ಡಾ. ಶ್ರೀನಿವಾಸ್ ವಿ. ವಾಲ್ಮೀಕಿ ಅವರು ಮಾನದಂಡಗಳು ಮತ್ತು ನಿಖರ ಅಳತೆಗಳ ಮಹತ್ವವನ್ನು ತಿಳಿಸಿದರು. ಸಂಕೇತ್ ಕಲಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವೀರಭದ್ರಪ್ಪ ಪ್ರಭು ಶೆಟ್ಟಿ ನಿರೂಪಿಸಿದರು. ಡಾ. ವಿಶಾಲದತ್ತ ವಿ. ಕೊಹಿರ್ ಸಮನ್ವಯ ವಹಿಸಿದರು. ಎರ್. ಉದಯಶಂಕರ ಎಸ್. ಬಳ್ಳಾರಿ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಐಇಐ ಪದಾಧಿಕಾರಿಗಳು, ಕಾಲೇಜಿನ ಬೋಧಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.