ಅಫಜಲಪುರ | ಮತಗಳ್ಳತನ ಮಾಡಿ ಕಾಂಗ್ರೆಸ್ ಅನ್ನು ನಿಯಂತ್ರಿಸಲು ಸಾಧ್ಯವಿಲ್ಲ: ಅರುಣಗೌಡ ಎಂ.ವೈ.ಪಾಟೀಲ್
ಕಲಬುರಗಿ : ಬಿಜೆಪಿ ಪಕ್ಷದವರು ಮತ ಕಳ್ಳತನ ಮಾಡಿ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಣದಲ್ಲಿಟ್ಟು ಅಕ್ರಮವಾಗಿ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರ ಹುಸಿ ಕನಸು ಎಂದಿಗೂ ನನಸಾಗಲಾರದು ಎಂದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರಾದ ಅರುಣ್ ಕುಮಾರ್ ಎಂ.ವೈ.ಪಾಟೀಲ್ ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಬ್ಲಾಕ್ ಘಟಕವು ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ "ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ" ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಏರುವುದನ್ನು ಅಭ್ಯಾಸ ಮಾಡಿಕೊಂಡಿರುವ ಬಿಜೆಪಿ ಪಕ್ಷ ನಮ್ಮ ಮತ ಕ್ಷೇತ್ರದಲ್ಲಿ ಕೂಡ ಮುಂದಿನ ಚುನಾವಣೆಗಳಲ್ಲಿ ಇಂತಹ ಕೃತ್ಯಗಳನ್ನು ನಡೆಸಬಹುದು. ಅದಕ್ಕಾಗಿ ನಾವು ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದರು.
ಈ ವೇಳೆ "ಜನಾದೇಶದ ಕಗ್ಗೊಲೆ ನಿಲ್ಲಿಸಿ" ಎಂಬ ಘೋಷಣೆಗಳನ್ನು ಕೂಗಲಾಯಿತು.
ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ರಮೇಶ್ ಪೂಜಾರಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪ್ರಕಾಶ್ ಜಮಾದಾರ್, ಸಿದ್ದಾರ್ಥ ಬಸರಿಗಿಡ, ಬ್ಲಾಕ್ ಕಾಂಗ್ರೆಸ್ ಕಮಿಟಿ ಮಾಜಿ ಅಧ್ಯಕ್ಷ ಶರಣು ಕುಂಬಾರ್, ಕಾಂಗ್ರೆಸ್ ಮುಖಂಡರಾದ ಸಿದ್ದು ಸಿರಸ್ಗಿ, ರೇಣುಕಾ ಸಿಂಗೆ, ಅನುಸೂಯ ಸೋಲೇಕರ್, ವಕೀಲರಾದ ಗುರುದೇವ್ ಪೂಜಾರಿ, ಗೌತಮ ಬಳುರ್ಗಿ, ಮಹದೇವಪ್ಪ ಕಲ್ಕೇರಿ, ಶಿವಾನಂದ ಗಾಡಿ ಸೌಕಾರ್, ಪುರಸಭೆ ಸದಸ್ಯರಾದ ಹಾಜಿ ಖಾಸಿಂಸಾಬ್ ಮುಜಾವರ್, ಸೈಫನ್ ಚಿಕ್ಕಳಗಿ ಮತ್ತು ಹಲವಾರು ಜನರು ಸಹಿಸಂಗ್ರಹದ ಬ್ಯಾನರ್ ಮೇಲೆ ಸಹಿ ಮಾಡಿದರು.
ಇದೇ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.