×
Ad

ಅಫಜಲಪುರ | ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Update: 2026-01-07 18:06 IST

ಅಫಜಲಪುರ: ಪಟ್ಟಣದ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಮಠದಲ್ಲಿ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ನೀಲಮ್ಮ ತಾವರಖೇಡ, ಪ್ರಧಾನ ಕಾರ್ಯದರ್ಶಿಯಾಗಿ ಸಾವಿತ್ರಿ ನಂದಿ, ಖಜಾಂಚಿ ರಾಧಿಕಾ ಶೇರಿಕಾರ, ಗೌರವಾಧ್ಯಕ್ಷರಾಗಿ ಇಂದುಮತಿ ಪಾಟೀಲ್, ರಾಜ್ಯ ಪರಿಷತ್ ಸದಸ್ಯರಾಗಿ ಸುಜಾತಾ ಪಾಟೀಲ್, ಹಿರಿಯ ಉಪಾಧ್ಯಕ್ಷರಾಗಿ ಮಹಾನಂದಾ ಹೆಗ್ಗಿ, ಉಪಾಧ್ಯಕ್ಷರಾಗಿ ನಿರ್ಮಲಾ ರಾಠೋಡ, ಅಥಿಯಾ ಬೇಗಂ, ಸಹ ಕಾರ್ಯದರ್ಶಿಯಾಗಿ ಸವಿತಾ, ಅನ್ನಪೂರ್ಣ ಅವಟೆ, ಸುವರ್ಣ ಟಿ., ಜ್ಯೋತಿ ರೂಗಿ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಮ್ಮ ನಿಂಬಾಳ, ಶ್ರೀದೇವಿ ವಾಳಿ, ಪ್ರೇಮಾ ಪಾಟೀಲ್, ದಿವ್ಯ ಕರಜಗಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸವಿತಾ ಮನ್ಮಿ, ಚನ್ನಮ್ಮ ಗುಣಾರಿ, ಸುಮಿತ್ರಾ ಮಿರಗಿ, ಕ್ರೀಡಾ ಕಾರ್ಯದರ್ಶಿ ಲಲಿತಾ ಮದರಿ, ಅಂತರಿಕ ಲೆಕ್ಕ ಪರಿಶೋಧಕರಾಗಿ ನಾಗರತ್ನ ಬಳೂರಗಿ ಅವರನ್ನು ಆಯ್ಕೆ ಮಾಡಿ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಬಸಣ್ಣ ಗುಣಾರಿ, ಕಸಾಪ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಪ್ರತಿಭಾದೇವು ಮಹೀಂದ್ರಾಕರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News