×
Ad

ಅಫಜಲಪುರ | ಉಚಿತ ಕಣ್ಣಿನ ತಪಾಸಣೆ ಶಿಬಿರ : 100 ಜನರಿಗೆ ತಪಾಸಣೆ, 46 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ

Update: 2026-03-09 20:38 IST

ಅಫಜಲಪುರ: ಮತಕ್ಷೇತ್ರದ ಕಲಬುರಗಿ ತಾಲೂಕಿನ ಫರಹತಾಬಾದ್‌ ಗ್ರಾಮದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಸಾರ್ವಜನಿಕ ಆಸ್ಪತ್ರೆ ಹಾಗೂ ಫರಹತಾಬಾದ್‌ ಪ್ರಾಥಮಿಕ ಆರೋಗ್ಯ ಕೇಂದ್ರ ಅವರುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಯಿತು.

ಶಿಬಿರವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್‌ ಉದ್ಘಾಟಿಸಿದರು.

ಶಿಬಿರದಲ್ಲಿ ಒಟ್ಟು 100 ಜನರಿಗೆ ಕಣ್ಣಿನ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 46 ಜನರನ್ನು ಮುಂದಿನ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಇಂತಹ ಆರೋಗ್ಯ ಶಿಬಿರಗಳು ತುಂಬಾ ಉಪಯುಕ್ತವಾಗಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಎಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಸಂಚಾಲಕರಾದ ಡಾ.ಶರಣಬಸಪ್ಪ ಹರವಾಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್, ಫರತಹಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಶಾಕ್ ಪಟೇಲ್, ನಾಗರಾಜ ನಿಂಬರಗಿ, ಶರಣು ಸಜ್ಜನ್, ಕೇಶವ ಮೊಟಗಿ, ಸಿದ್ಧರಾಮ ಬೋಲಶೆಟ್ಟಿ, ಶರಣಬಸಪ್ಪ ಮೈನಾಳ, ಚಂದ್ರಕಾಂತ ನಡಗಟ್ಟಿ, ದೇವಿಂದ್ರಪ್ಪ ಯಾದಗಿರಿ, ವಾಹಿಧ್ ಕೋಬಳ, ಭಗವಂತರಾಯ ಪರಿಟ, ಮರೆಪ್ಪ ಪೂಜಾರಿ, ಹರ್ಷ ಮಹಾಶೆಟ್ಟಿ, ಶರಣು ಕೋಣಿನ ಉಪಸ್ಥಿತರಿದ್ದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಫರಹತಾಬಾದ ಮುಖ್ಯ ವೈದ್ಯಾಧಿಕಾರಿ ಸಂತೋಷ್ ಪಾಟೀಲ್, ಕಣ್ಣಿನ ತಪಾಸಣೆ ಸಂಯೋಜಕ ಸುರೇಶ್ ಭಂಡಾಗರ ಹಾಗೂ ಗ್ರಾಮಸ್ಥರು, ಪಕ್ಷದ ಮುಖಂಡರು ಮತ್ತು ಯುವ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News