×
Ad

Kalaburagi | ಯುಗಾದಿ ಹಬ್ಬ : ಶ್ರೀಶೈಲಂಗೆ ವಿಶೇಷ ಬಸ್‍ಗಳ ಕಾರ್ಯಾಚರಣೆ

Update: 2026-03-09 20:17 IST

ಕಲಬುರಗಿ: ಚಂದ್ರಮಾನ ಯುಗಾದಿ ಪ್ರಯುಕ್ತ ಮಾ.19 ರಂದು ಆಂಧ್ರಪ್ರದೇಶ ರಾಜ್ಯದ ಶ್ರೀಶೈಲಂನಲ್ಲಿ ಜರುಗುವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಇದೇ ಮಾ.10 ರಿಂದ 20 ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ/ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ/ಹೆಚ್ಚುವರಿ ವಾಹನಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕರು ನಿರ್ದೇಶಕ ಸುಶೀಲಾ ಅವರು ತಿಳಿಸಿದ್ದಾರೆ.

ಈ ಜಾತ್ರೆಗೆ ಹೋಗಲು ಒಟ್ಟಿಗೆ 50 ಜನ ಪ್ರಯಾಣಿಕರು ಇದ್ದಲ್ಲಿ, ಒಂದು ವಾಹನವನ್ನು ತಮ್ಮ ಗ್ರಾಮ/ಸ್ಥಳದಿಂದ ಎಲ್ಲಿಯೂ ನಿಲುಗಡೆ ಮಾಡದೇ ಬೈಪಾಸ್ ಮುಖಾಂತರ ನೇರವಾಗಿ ಶ್ರೀಶೈಲಂಗೆ ಕಾರ್ಯಾಚರಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವಿಭಾಗೀಯ ಸಂಚಾರ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ಕಲಬುರಗಿ ವಿಭಾಗ-1ರ ವಿಭಾಗೀಯ ಸಂಚಾರ ಅಧಿಕಾರಿಗಳ ಮೊಬೈಲ್ ಸಂಖ್ಯೆ 7760992102, ಕಲಬುರಗಿ ವಿಭಾಗ-2 ಮೊಬೈಲ್ ಸಂಖ್ಯೆ-7760984086, ಯಾದಗಿರಿ-7760992452, ಬೀದರ-7760992202, ರಾಯಚೂರು-7760992352, ಕೊಪ್ಪಳ-7760992402, ಬಳ್ಳಾರಿ-7760992152, ವಿಜಯನಗರ (ಹೊಸಪೇಟೆ)-7760992302 ಹಾಗೂ ವಿಜಯಪುರ-7760992252 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News