×
Ad

ಅಫಜಲಪುರ | ಜಕಣಾಚಾರ್ಯರ ಶಿಲ್ಪಕಲೆ ದೇಶವಿದೇಶಗಳಲ್ಲಿ ಗಮನ ಸೆಳೆದಿದೆ : ಸಂಜೀವಕುಮಾರ

Update: 2026-01-01 18:41 IST

ಅಫಜಲಪುರ: ವಿಶ್ವಕರ್ಮ ಕುಲತಿಲಕ ಅಮರಶಿಲ್ಪಿ ಜಕಣಾಚಾರ್ಯರ ಶಿಲ್ಪಕಲೆ ದೇಶ–ವಿದೇಶದ ಜನರನ್ನು ಸೆಳೆಯುವಷ್ಟು ಅಪಾರ ಮಹತ್ವ ಹೊಂದಿದೆ ಎಂದು ತಹಶೀಲ್ದಾರ್ ಸಂಜೀವಕುಮಾರ ದಾಸರ ಹೇಳಿದರು.

ಪಟ್ಟಣದ ತಹಶೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಕಣಾಚಾರ್ಯರ ಶಿಲ್ಪಸಾಧನೆ ಈ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅಮೂಲ್ಯ ಕೊಡುಗೆಯಾಗಿದೆ. ಅವರ ಕಲೆ ಪ್ರವಾಸೋದ್ಯಮಕ್ಕೂ ಬಲ ನೀಡಿದ್ದು, ವಿದೇಶಿಯರೂ ಈ ನಾಡಿನ ಶಿಲ್ಪವೈಭವವನ್ನು ಕಣ್ತುಂಬಿಕೊಳ್ಳುವಂತೆ ಮಾಡಿದೆ ಎಂದರು.

ಜಕಣಾಚಾರ್ಯರ ಸಾಧನೆಯನ್ನು ಗುರುತಿಸಿ ಸರ್ಕಾರ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.

ವಿಶ್ವಕರ್ಮ ಸಮುದಾಯದ ಹಿರಿಯ ಮುಖಂಡ ಈರಣ್ಣ ಪಂಚಾಳ್ ಮಾತನಾಡಿ, ಅಯೋಧ್ಯೆಯಲ್ಲಿನ ರಾಮನ ಮೂರ್ತಿ ಕೆತ್ತನೆ ವಿಶ್ವಕರ್ಮ ಸಮುದಾಯದವರಿಂದಲೇ ಆಗಿದ್ದು, ಬೆಂಗಳೂರಿನ ವಿಧಾನಸೌಧವನ್ನು ಕೆಂಗಯ್ಯ ಹನುಮಂತಯ್ಯ ಅವರ ಕನಸಿನಂತೆ ರೂಪುಗೊಳಿಸಿದವರು ಜಕಣಾಚಾರ್ಯರೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಂಕರ ಮ್ಯಾಕೇರಿ, ಮಹಾಂತೇಶ ಬಡಿಗೇರ, ಪ್ರಭಾವತಿ ಮೇತ್ರಿ, ರವಿ ಕಣ್ಣಿ, ಮೌನೇಶ್ ಬಡಿಗೇರ, ಅಂದಪ್ಪ ಪತ್ತಾರ, ಸಿದ್ದಪ್ಪ ಸಿನ್ನೂರ, ಅವಧೂತ ಜಮಾದಾರ ವಿಶ್ವಕರ್ಮ ಮಹಾಸಭಾ ತಾಲೂಕು ಅಧ್ಯಕ್ಷ ಮಾಂತೇಶ್ ಬಡಿಗೇರ್, ಗೌರವಧ್ಯಕ್ಷ ಪ್ರಕಾಶ್ ಬಡಿಗೇರ್, ಉಪಾಧ್ಯಕ್ಷ ರಮೇಶ್ ಸುತಾರ್ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಬಡಿಗೇರ, ಅರವಿಂದ್ ಸುತಾರ್ ಗಂಗಾಧರ್ ಸೋನಾರ್ ದೇವೇಂದ್ರ ಸುತಾರ್ ಅಂದಪ್ಪ ಸುತಾರ್ ಸಂತೋಷ ಬಡಿಗೇರ್ ಮಹೇಶ್ ಬಡಿಗೇರ್ , ಚಂದ್ರಕಾಂತ ಬಡಗೇರಿ, ಮೌನೇಶ ನರಗೋಳ, ಸಂತೋಷ ಬಡಿಗೇರ, ಶಿಕ್ಷಕ ಮೌನೇಶ ಬಡಿಗೇರ,ಹನಮಂತ ಸುತಾರ,ಶಾಂತು ಪತ್ತಾರ,ಚಂದ್ರಕಾಂತ ಸುತಾರ,ಮಹಾದೇವ ವಿಶ್ವಕರ್ಮ, ರಾಜ ಗೋಪಾಲ,ಈರಣ್ಣ ಬಡಿಗೇರ,ಸಿದ್ದು ಬಡಿಗೇರ, ಸಂಜಿವಕುಮಾರ, ಚಂದ್ರಕಾಂತ ಸುತಾರ, ಮಾಣಿಕ, ಸುರೇಶ ನಂದಗಾಂವ್, ದತ್ತು ಹವಳಗಿ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News