Afzalpur | ಸಾಮಾಜಿಕ ಸೇವೆಯ ಮೂಲಕ ಮತೀನ ಪಟೇಲ್ ಜನ್ಮದಿನ ಆಚರಣೆ
ಅಫಜಲಪುರ : ಜಿಪಂ ಮಾಜಿ ಸದಸ್ಯ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ಮತೀನ ಪಟೇಲ್ ಅವರ 44ನೇ ಜನ್ಮದಿನವನ್ನು ಅಭಿಮಾನಿಗಳು ಸಾಮಾಜಿಕ ಕಾರ್ಯಗಳ ಮೂಲಕ ಸರಳವಾಗಿ ಆಚರಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಜನ್ಮದಿನಕ್ಕೆ ವಿಶೇಷ ಅರ್ಥ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಫರತಾಬಾದ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಸ್ಪಕ್ ಬಂದರವಾಡ, “ಮತೀನ ಪಟೇಲ್ ಅವರು ಜಿಪಂ ಸದಸ್ಯರಾಗಿದ್ದ ಅವಧಿಯಲ್ಲಿ ಕರಜಗಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಸಾಮಾಜಿಕ ಸೇವೆ, ದಾನಧರ್ಮ ಹಾಗೂ ಜನಸೇವೆಯ ಮೂಲಕ ಜಿಲ್ಲೆಯಾದ್ಯಂತ ಗುರುತಿಸಿಕೊಂಡಿದ್ದಾರೆ” ಎಂದು ಹೇಳಿದರು.
“ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ದಲಿತರ ಪರವಾಗಿ ಸದಾ ನಿಂತಿರುವ ನಾಯಕರು” ಎಂದು ಪ್ರಶಂಸಿಸಿದರು.
ಅಫಜಲಪುರ ಮತಕ್ಷೇತ್ರ ಸೇರಿದಂತೆ ಕಲಬುರಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮೂಲಕ ಮತೀನ ಪಟೇಲ್ ಜನಮನ ಗೆದ್ದಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಪಕ್ಷದ ವರಿಷ್ಠರು ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಅಫಜಲಪುರ ಮತಕ್ಷೇತ್ರದಲ್ಲಿ ಎಂ.ವೈ. ಪಾಟೀಲ್ ಅವರಿಗೆ ಶಕ್ತಿಯಾಗಿ ಮತೀನ ಪಟೇಲ್ ಕೆಲಸ ಮಾಡುತ್ತಿದ್ದಾರೆ. ಬಡವರು, ನೊಂದವರು ಹಾಗೂ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಪಕ್ಷದ ನಾಯಕರು ಇವರನ್ನು ಗುರುತಿಸಿ ರಾಜ್ಯಮಟ್ಟದಲ್ಲಿ ಉತ್ತಮ ಸ್ಥಾನಮಾನ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಬೀಮ ಗೊಬ್ಬೂರ, ದುಂಡು ಜಮಾದಾರ, ಹಾಜಿ ಮುಜಾವರ, ಮೈಹಿಬೂಬ ಮನಿಯಾರ, ಸೈಪನ್ ಚಿಕ್ಕಳಗಿ, ಗೌಸ್ ಮುಜಾವರ, ಮೈಹಿಬೂಬ ಸಂಗಾಪೂರ, ಪ್ರವೀಣ್ ಕಲ್ಲೂರ, ರುಕ್ಮೊದ್ದಿನ್ ಫರತಾಬಾದ, ಕಬೀರ ಪಟೇಲ್, ನೂರ್ ಅಲಿ ಬಂದರವಾಡ, ಗಾಲೀಬ ಮುಜಾವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.