Afzalpur | ಧರಣಿ ವೇದಿಕೆಯಲ್ಲಿ ಪ್ರಗತಿಪರ ರೈತ ಮುಹಮ್ಮದ್‌ ಸಾಬ್ ಹಳ್ಯಾಳರಿಗೆ ಸನ್ಮಾನ

Update: 2026-07-17 19:19 IST

ಅಫಜಲಪುರ : ಭೀಮಾ ನದಿಗೆ ನೀರು ಬಿಡುಗಡೆ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹದ ವೇದಿಕೆಯಲ್ಲಿ ಪ್ರಗತಿಪರ ರೈತ ಮಹ್ಮದ್ ಸಾಬ್ ಹಳ್ಯಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಮುಖಂಡರು, ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿರುವ ಹಾಗೂ ಕೃಷಿಯಲ್ಲಿ ಮಾದರಿಯಾಗಿರುವ ರೈತರನ್ನು ಗೌರವಿಸುವುದು ಇತರ ರೈತರಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಮಹ್ಮದ್ ಸಾಬ್ ಹಳ್ಯಾಳ ಅವರು ಪ್ರತಿ ವರ್ಷ ಸುಮಾರು 80 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದು ಯಶಸ್ವಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಕೃಷಿಯೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲೂ ಸಕ್ರಿಯರಾಗಿರುವ ಅವರು, ಧರಣಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ವಯಂಪ್ರೇರಿತವಾಗಿ 5,000 ರೂ. ದೇಣಿಗೆ ನೀಡಿದರು.

ರೈತ ಹೋರಾಟಕ್ಕೆ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡಿದ ಮಹ್ಮದ್ ಸಾಬ್ ಹಳ್ಯಾಳ ಅವರ ಕಾರ್ಯವನ್ನು ಸಂಘದ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಶ್ಲಾಘಿಸಿದರು.

.ಈ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀಮಂತ ಬಿರಾದಾರ, ರಮೇಶ ಪಾಟೀಲ ಲತೀಪ್ ಪಟೇಲ,ಮುರುಗೇಂದ್ರ ಮಸಳಿ, ಶಾಂತು ಅಂಜುಟಗಿ, ಪ್ರಭಾವತಿ ಮೇತ್ರಿ,ಗುರು ಚಾಂದಕವಟೆ, ರಮೇಶ ಪಾಟೀಲ ಬಸವರಾಜ ಘಾಣೂರ, ಭೀಮರಾಯ ತಳವಾರ, ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News