ಕಾಳಗಿ | 5 ಕೋಟಿ ರೂ. ವೆಚ್ಚದ ಬ್ರಿಡ್ಜ್ ಕಂ ಬ್ಯಾರೆಜ್ ಕಾಮಗಾರಿಗೆ ಚಾಲನೆ

Update: 2026-07-17 19:35 IST

ಕಾಳಗಿ : ಪಟ್ಟಣದ ಭರತನೂರ ರಸ್ತೆ ಮಾರ್ಗದಲ್ಲಿರುವ ನಂದೂರ ಶಿವಲಿಂಗೇಶ್ವರ ದೇವಸ್ಥಾನದ ಸಮೀಪ ನಾಲೆಗೆ ಅಡ್ಡಲಾಗಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬ್ರಿಡ್ಜ್ ಕಂ ಬ್ಯಾರೆಜ್ ಕಾಮಗಾರಿಗೆ ಹಾರಕೂಡದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಶುಕ್ರವಾರ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜೇಶ್ ಗುತ್ತೇದಾರ ಕಾಳಗಿ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರ ಅನುದಾನದಲ್ಲಿ ಎಸ್‌ಬಿಐ ಬ್ಯಾಂಕ್ ಸಮೀಪದ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ 4 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಕಿಂಡಿ ತಾಂಡದಲ್ಲಿ 5 ಲಕ್ಷ ರೂ. ವೆಚ್ಚದ ಕುಡಿಯುವ ನೀರು ಹಾಗೂ ಪೈಪ್‌ಲೈನ್ ದುರಸ್ತಿ ಕಾಮಗಾರಿ, 4 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಹಾರಕೂಡ ಶ್ರೀಗಳ ಆಶಯದಂತೆ ನಂದೂರ ಶಿವಲಿಂಗೇಶ್ವರ ದೇವಸ್ಥಾನದ ಸಮೀಪ ನಾಲೆಗೆ ಅಡ್ಡಲಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಯೋಜನೆಯಡಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ವಿಶೇಷ ಅನುದಾನ ತಂದಿದ್ದು, ಆ ಕಾಮಗಾರಿಗೆ ಶ್ರೀಗಳಿಂದಲೇ ಚಾಲನೆ ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಬಳಿಕ ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಭರತನೂರದ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಹಾಗೂ ಸ್ಥಳೀಯ ಹಿರೇಮಠದ ನೀಲಕಂಠ ಮರಿದೇವರು ವೇದ ಸಿಟಿ ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಡಾ.ಶಿವಾನಂದ ಮಜ್ಜಿಗೆ, ರಾಘವೇಂದ್ರ ಗುತ್ತೇದಾರ, ಶಿವಶರಣಪ್ಪ ಕಮಲಾಪೂರ, ವಿಶ್ವನಾಥ ವನಮಾಲಿ, ವೀರಣ್ಣ ಗಂಗಾಣಿ, ಶಿವಶರಣಪ್ಪ ಗುತ್ತೇದಾರ, ಪಪಂ ಸದಸ್ಯ ಶರಣಪ್ಪ‌ ಬೆಲೂರ, ಗುರುರಾಜ ಮದ್ದೂರು, ಶರಣು ಮಜ್ಜಿಗೆ, ವೇದಪ್ರಕಾಶ ಮೊಟಗಿ, ಮಹೇಶ ಗುತ್ತೇದಾರ, ಗೌರಿಶಂಕರ ಗುತ್ತೇದಾರ, ದತ್ತು ಗುತ್ತೇದಾರ, ಸತೀಶ್ ಕಮಲಾಪೂರ, ಸಂತೋಷ ಪತಂಗೆ, ಗೀತಾ ಸಿಂಗಶೆಟ್ಟಿ, ಸುವರ್ಣಾ ಪರುತೆ, ಬಸವರಾಜ ಮಡಿವಾಳ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News